×
Ad

ವಿಡಿಯೋ ಗೇಮ್‌ ತುಣುಕನ್ನು ಯುದ್ಧದ ಚಿತ್ರಣವೆಂದು ಪ್ರಸಾರ ಮಾಡಿದ ಟಿವಿ9 ಕನ್ನಡ, ಮಾತೃಭೂಮಿ ವಾಹಿನಿ

Update: 2022-02-25 16:54 IST
Photo: altnews.in 

ಬೆಂಗಳೂರು/ಕೊಚ್ಚಿ: ಉಕ್ರೇನ್‌, ರಶ್ಯಾ ಯುದ್ಧದ ವಿಡಿಯೋಗಳೆಂದು ಹಲವು ಸಂಬಂಧವಿಲ್ಲದ ವಿಡಿಯೋಗಳು, ಹಳೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದೆ. ಕೆಲವೊಂದು ಮಾಧ್ಯಮಗಳು ಕೂಡಾ ಯಾವುದೋ ವಿಡಿಯೋವನ್ನು ಯುದ್ಧಗ್ರಸ್ಥ ಉಕ್ರೇನಿನ ವಿಡಿಯೋ ಎಂದ ಪ್ರಸಾರ ಮಾಡಿದೆ.

ಇದೀಗ ಕನ್ನಡದ ಟಿವಿ9 ವಿಡಿಯೋ ಗೇಮ್‌ಗಾಗಿ ನಿರ್ಮಿಸಲ್ಪಟ್ಟ ವಿಡಿಯೋವನ್ನು ಪ್ರಸಾರ ಮಾಡಿದೆ. “ಉಕ್ರೇನ್‌ ಮೇಲೆ ಬಾಂಬಿಂಗ್‌, ರಷ್ಯಾ ಪೈಲಟ್‌ ಸ್ಥಿತಿ ನೋಡಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಗೇಮ್‌ ತುಣುಕನ್ನು ಪ್ರಸಾರ ಮಾಡಿದೆ. 

ಟಿವಿ9 ಮಾತ್ರವಲ್ಲದೆ ಮಲಯಾಳಂ ಖ್ಯಾತ ಸುದ್ದಿ ವಾಹಿನಿ ಮಾತೃಭೂಮಿ ಕೂಡಾ ಇದೇ ವಿಡಿಯೋವನ್ನು ನಿಜವಾದ ವಿಡಿಯೋ ಎಂದು ಬಿತ್ತರಿಸಿದೆ. 

ವಾಸ್ತವವೇನು?

ಅಸಲಿಗೆ ಈ ವಿಡಿಯೋ 2013 ರ ವೀಡಿಯೊ ಗೇಮ್ ARMA 3 ಯದ್ದಾಗಿದ್ದು, ಇದೊಂದು ಮಿಲಿಟರಿ ಕಾರ್ಯಾಚರಣೆಯ ಆಟವಾಗಿದೆ. ವೀಡಿಯೊ ಕೀಫ್ರೇಮ್‌ ಗಳನ್ನು ಸರ್ಚ್‌ ಮಾಡಿದಾಗ ಇದು ಈ ಹಿಂದೆ ಯೂಟ್ಯೂಬ್‌ ನಲ್ಲಿ ಅಪ್ಲೋಡ್‌ ಮಾಡಿದ ವೀಡಿಯೋವಾಗಿತ್ತು. ಇದು ವೈರಲ್‌ ಕ್ಲಿಪ್‌ ಗಿಂತ 14 ಸೆಕೆಂಡ್‌ ಹೆಚ್ಚಿದ್ದ ವೀಡಿಯೊವಾಗಿದೆ. 10ನೇ ಸೆಕೆಂಡ್‌ ನಿಂದ ಈ ವೈರಲ್‌ ವೀಡಿಯೋವನ್ನು ಬಳಸಲಾಗಿತ್ತು. ಎಂದು altnews.in ಕಂಡುಕೊಂಡಿದೆ. 

ರಶ್ಯಾ ಹಾಗೂ ಉಕ್ರೇನ್ ನಡುವೆ ನಡೆದಿರುವ ಸಂಘರ್ಷದಲ್ಲಿ ಮೊದಲ ದಿನ 137 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಶುಕ್ರವಾರ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News