×
Ad

ಕೊಲೆ ಯತ್ನ, ದಲಿತ ದೌರ್ಜನ್ಯ ಪ್ರಕರಣದ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Update: 2022-02-26 22:31 IST

ಉಡುಪಿ, ಫೆ.26: ಕಳೆದ ಎರಡು ತಿಂಗಳ ಹಿಂದೆ ಬೈಂದೂರು ಠಾಣಾ ವ್ಯಾಪ್ತಿ ಯಲ್ಲಿ ನಡೆದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಹಾಗೂ ದಲಿತ ದೌರ್ಜನ್ಯ ಪ್ರಕರಣದ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.

ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ ಜೋಷಿ ಅವರು ಈ ಆದೇಶ ನೀಡಿದ್ದಾರೆ.
2021ರ ಡಿ.27ರಂದು ಬೈಂದೂರು ನಂದನವನದ ನಿವಾಸಿ ರವಿಚಂದ್ರ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅವ್ಯಾಚ ಶಬ್ದದಿಂದ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬೈಂದೂರು ಬಿಜೂರು ಕಾಡಿನತಾರು ನಿವಾಸಿ ಸುರೇಶ್ ಪೂಜಾರಿ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಐಪಿಸಿ ಕಲಂ 307, 504, 506 ಅಡಿ ಪ್ರಕರಣ ದಾಖಲಾಗಿತ್ತು.

2021ರ ಡಿ.27ರಂದು ಬೈಂದೂರು ನಂದನವನದ ನಿವಾಸಿ ರವಿಚಂದ್ರ ಎನ್ನುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅವ್ಯಾಚ ಶಬ್ದದಿಂದ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬೈಂದೂರು ಬಿಜೂರು ಕಾಡಿನತಾರು ನಿವಾಸಿ ಸುರೇಶ್ ಪೂಜಾರಿ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಐಪಿಸಿ ಕಲಂ 307, 504, 506 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿ ತಲೆಮರೆಸಿಕೊಂಡಿದ್ದು ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಅರ್ಜಿ ಸಲ್ಲಿಸಿದ್ದರು. ಮೇಲ್ನೋಟಕ್ಕೆ ಆರೋಪಗಳು ಕಂಡುಬಂದಿದ್ದು ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ನಿರೀಕ್ಷಣಾ ಜಾಮೀನು ನೀಡಬಾರದು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News