ಉಕ್ರೆನ್‌ ಬಿಕ್ಕಟ್ಟು: ಬ್ರಿಟನ್‌ ವೈಮಾನಿಕ ತಾಲೀಮಿನಲ್ಲಿ ಭಾಗವಹಿಸದಿರಲು ಭಾರತೀಯ ವಾಯುಪಡೆ ನಿರ್ಧಾರ

Update: 2022-02-26 17:48 GMT
photo/twitter

ಹೊಸದಿಲ್ಲಿ: ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ದಾಳಿಯಿಂದಾದ ಉಂಟಾಗಿರುವ ಬಿಕ್ಕಟ್ಟು ಗಮನದಲ್ಲಿಟ್ಟು ಮಾರ್ಚ್‌ ತಿಂಗಳಲ್ಲಿ ಬ್ರಿಟನ್‌ನಲ್ಲಿ ನಡೆಯಲಿರುವ ಬಹು ರಾಷ್ಟ್ರಗಳ ವೈಮಾನಿಕ ಸಮರ ಅಭ್ಯಾಸದಲ್ಲಿ ಭಾಗವಹಿಸುವ ನಿರ್ಧಾರದಿಂದ ಭಾರತೀಯ ವಾಯುಪಡೆ ಹಿಂದೆ ಸರಿದಿದೆ ಎಂದು thehindu.com ವರದಿ ಮಾಡಿದೆ.

ವಾಡಿಂಗ್ಟನ್‌ನಲ್ಲಿ ಮಾರ್ಚ್ 6 ರಿಂದ 27ರವರೆಗೆ ನಡೆಯಲಿರುವ  ʼಕೋಬ್ರಾ ವಾರಿಯರ್ 2022ʼ  ಕಸರತ್ತಿನಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆಯ 5 ತೇಜಸ್ ಲಘು ಯುದ್ಧ ವಿಮಾನಗಳನ್ನು ಕಳುಹಿಸಲು ನಿರ್ಧರಿಸಲಾಗಿತ್ತು. ಯುಕೆ, ಬೆಲ್ಜಿಯಂ, ಸೌದಿ ಅರೇಬಿಯಾ, ಸ್ವೀಡನ್ ಮತ್ತು ಯುಎಸ್ ವಾಯುಪಡೆಗಳು ಈ ತಾಲೀಮಿನ ಭಾಗವಾಗಿದೆ.

ಆದರೆ, ಸದ್ಯ ಉಲ್ಬಣಿಸಿರುವ ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಇದರದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ. ಐಎಎಫ್ ‘ಕೋಬ್ರಾ ವಾರಿಯರ್’ ತಾಲೀಮಿನಲ್ಲಿ ಭಾಗವಹಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಆಗಿದೆ. ಉಕ್ರೇನ್ ವಿರುದ್ಧದ ರಷ್ಯಾದ ಮಿಲಿಟರಿ ದಾಳಿಯ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತೆಗೆದುಕೊಂಡ ನಿರ್ಣಯದ ಮತದಾನದಿಂದ ಭಾರತವು ದೂರ ಉಳಿದ ಕೆಲವು ಗಂಟೆಗಳ ನಂತರ ಈ ನಿರ್ಧಾರವು ಹೊರಬಿದ್ದಿದೆ.

ಈ ವ್ಯಾಯಾಮವು ಕಾರ್ಯಾಚರಣೆಯಲ್ಲಿ ಭಾಗವಹಿಸುವ ವಾಯುಪಡೆಗಳ ನಡುವೆ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ, ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಸ್ನೇಹದ ಬಂಧಗಳನ್ನು ಬೆಸೆಯುವ ಗುರಿಯನ್ನು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News