ಉಕ್ರೇನ್‌ಗೆ 8.7 ಮಿಲಿಯನ್ ಡಾಲರ್ ದೇಣಿಗೆ ನೀಡಿದ ಜಪಾನಿನ ಬಿಲಿಯನೇರ್ ಹಿರೋಶಿ ಮಿಕಿತಾನಿ
ಟೋಕಿಯೊ(ಜಪಾನ್): ಜಪಾನಿನ ಬಿಲಿಯನೇರ್ ಹಿರೋಶಿ ಮಿಕಿತಾನಿ ಅವರು ಉಕ್ರೇನ್ ಸರಕಾರಕ್ಕೆ 8.7 ಮಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ರವಿವಾರ ಹೇಳಿದ್ದಾರೆ. ರಷ್ಯಾದ ಆಕ್ರಮಣವನ್ನು "ಪ್ರಜಾಪ್ರಭುತ್ವಕ್ಕೆ ಸವಾಲು" ಎಂದು ಕರೆದಿದ್ದಾರೆ.
1 ಬಿಲಿಯನ್ ಯೆನ್ (8.7 ಮಿಲಿಯನ್ ಡಾಲರ್) ದೇಣಿಗೆಯು "ಉಕ್ರೇನ್‌ನಲ್ಲಿ ಹಿಂಸಾಚಾರಕ್ಕೆ ಬಲಿಯಾದ ಜನರಿಗೆ ಸಹಾಯ ಮಾಡಲು ಮಾನವೀಯ ಚಟುವಟಿಕೆಗಳಿಗೆ" ವಿನಿಯೋಗವಾಗುತ್ತದೆ ಎಂದು ಇ-ಕಾಮರ್ಸ್ ದಿಗ್ಗಜ ಕಂಪೆನಿ ‘ಕುಟೆನ್’ನ ಸಂಸ್ಥಾಪಕರಾದ ಹಿರೋಶಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತಾನು 2019 ರಲ್ಲಿ ಕೈವ್‌ಗೆ ಭೇಟಿ ನೀಡಿದ್ದು,ಝೆಲೆನ್ಸ್ಕಿಯನ್ನು ಭೇಟಿಯಾಗಿದ್ದೆ ಎಂದು ಮಿಕಿತಾನಿ ಹೇಳಿದರು.
"ನನ್ನ ಆಲೋಚನೆಗಳು ನಿಮ್ಮೊಂದಿಗೆ ಹಾಗೂ ಉಕ್ರೇನ್ ಜನರೊಂದಿಗೆ ಇವೆ" ಎಂದು ಮಿಕಿಟಾನಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
"ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಉಕ್ರೇನ್ ಅನ್ನು ನ್ಯಾಯಸಮ್ಮತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಎಂದು ನಾನು ನಂಬುತ್ತೇನೆ’’ ಎಂದು ಅವರು ಹೇಳಿದ್ದಾರೆ.