×
Ad

ಮಾಡಿನಿಂದ ಬಿದ್ದು ಯುವಕ ಮೃತ್ಯು

Update: 2022-02-27 22:27 IST

ಶಿರ್ವ, ಫೆ.27: ಪಿಲಾರು ಗ್ರಾಮದ ಪಿಲಾರ್‌ ಖಾನ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಹೊರಗಡೆ ಸಿಮೆಂಟ್ ಶೀಟ್ ಮಾಡಿನಲ್ಲಿ ಕಸ ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶಾಂತಪ್ಪಎಲ್.(38) ಎಂದು ಗುರುತಿಸಲಾಗಿದೆ. ಇವರು ಫೆ.25 ರಂದು ಸಿಮೆಂಟ್ ಶೀಟಿನ ಕಸವನ್ನು ತೆಗೆಯುತ್ತಿರುವಾಗ ಸಿಮೆಂಟ್ ಶೀಟ್ ತುಂಡಾಗಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಇವರು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.26ರಂದು ಬೆಳಗಿನ ಜಾವ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News