×
Ad

ಸೇನೆಯ ಮೀಸಲು ವಿಭಾಗಕ್ಕೆ ಸೇರ್ಪಡೆಗೊಂಡ ಉಕ್ರೇನ್‌ನ ಟೆನಿಸ್ ಆಟಗಾರ ಸ್ಟಾಕೊವ್‌ಸ್ಕಿ

Update: 2022-02-27 23:17 IST

ಲಂಡನ್, ಫೆ.27: ರಶ್ಯಾದ ಆಕ್ರಮಣವನ್ನು ವಿರೋಧಿಸಿ, ಆ ದೇಶದ ವಿರುದ್ಧ ಹೋರಾಡಲು ತಾನು ಸೇನೆಯ ಮೀಸಲು ವಿಭಾಗಕ್ಕೆ ಸೇರ್ಪಡೆಯಾಗಿರುವುದಾಗಿ ಉಕ್ರೇನ್‌ನ ಟೆನಿಸ್ ಆಟಗಾರ ಸೆರ್ಗೆಯ್ ಸ್ಟಾಕೊವ್‌ಸ್ಕಿ ಶನಿವಾರ ಹೇಳಿದ್ದಾರೆ. 2013ರ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಖ್ಯಾತ ಆಟಗಾರ ರೋಜರ್ ಫೆಡರರ್ರನ್ನು ಸೋಲಿಸಿದ್ದ, ಈಗ ವಿಶ್ವದ 31ನೇ ಶ್ರೇಯಾಂಕದ ಆಟಗಾರ 36 ವರ್ಷದ ಸ್ಟಾಕೊವ್‌ಸ್ಕಿ, ಪತ್ನಿ ಮತ್ತು ಮಗುವನ್ನು ಸುರಕ್ಷಿವಾಗಿ ಹಂಗರಿಗೆ ತಲುಪಿಸಿದ ಬಳಿಕ ಸೇನೆಯ ಕರೆಗೆ ಸಂತೋಷದಿಂದ ಉತ್ತರಿಸುವುದಾಗಿ ಹೇಳಿದ್ದಾರೆ.

 ಖಂಡಿತಾ ನಾನು ಯುದ್ಧ ಮಾಡುತ್ತೇನೆ. ಕಳೆದ ವಾರ ಸೇನೆಯ ಮೀಸಲು ವಿಭಾಗಕ್ಕೆ ಸೇರುವ ದಾಖಲೆಗೆ ಸಹಿ ಹಾಕಿದ್ದೇನೆ. ಸೇನೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನಗಿಲ್ಲ. ಆದರೆ ಖಾಸಗಿ ಬಂದೂಕು ಹೊಂದಿದ್ದು ಬಂದೂಕು ಗುರಿ ಇಡುವುದರಲ್ಲಿ ನಿಪುಣತೆ ಇದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ತಾನು ಕುಟುಂಬ ಸಹಿತ ಕಟ್ಟಡದ ಭೂಗತ ಪಾರ್ಕಿಂಗ್ ಪ್ರದೇಶದಲ್ಲಿ 2 ದಿನ ಅಡಗಿ ಕುಳಿತಿದ್ದೆ. ಬಳಿಕ ತನ್ನನ್ನು ಕಿರಿಯ ಸಹೋದರಿಯೊಂದಿಗೆ ಉಕ್ರೇನ್‌ನಿಂದ ಹೊರ ಕಳಿಸಲು ಹೆತ್ತವರು ನಿರ್ಧರಿಸಿದರು. ಈಗ ನಾವು ನಮ್ಮ ದೇಶದ ಗಡಿ ದಾಟಿ ಬಂದಿದ್ದೇವೆ ಎಂದು ಉಕ್ರೇನ್‌ನ ವೃತ್ತಿಪರ ಮಹಿಳಾ ಟೆನಿಸ್ ಆಟಗಾರ್ತಿ ಡಯಾನಾ ಯಸ್ತ್ರೆಂಸ್ಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News