ಯುದ್ಧಕ್ಕೆ ತಯಾರಾಗಿಸಿ ʼಅಣ್ವಸ್ತ್ರ ತ್ರಿಕೋನʼವನ್ನು ಇರಿಸಲಾಗಿದೆ: ಪುಟಿನ್‌ಗೆ ಮಾಹಿತಿ ನೀಡಿದ ರಷ್ಯಾ ರಕ್ಷಣಾ ಸಚಿವ

Update: 2022-02-28 17:49 GMT
ಪುಟಿನ್‌

ಮಾಸ್ಕೋ,ಫೆ.28: ಉಕ್ರೇನ್‌ನಲ್ಲಿ ಯುದ್ಧ ಸೋಮವಾರ ಐದನೇ ದಿನವನ್ನು ಪ್ರವೇಶಿಸಿದ್ದು,‘ಅಣ್ವಸ್ತ್ರ ತ್ರಿಕೋನ ’ವನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ರಷ್ಯದ ರಕ್ಷಣಾ ಸಚಿವರು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅಣ್ವಸ್ತ್ರ ತ್ರಿಕೋನವು ಮೂರು ಪಾರ್ಶ್ವಗಳನ್ನು ಹೊಂದಿರುವ ಮಿಲಿಟರಿ ರಚನೆಯಾಗಿದ್ದು, ಭೂಮಿಯಿಂದ ಉಡಾಯಿಸಬಹುದಾದ ಪರಮಾಣು ಕ್ಷಿಪಣಿಗಳು, ಪರಮಾಣು ಕ್ಷಿಪಣಿ ಸಜ್ಜಿತ ಜಲಾಂತರ್ಗಾಮಿಗಳು ಹಾಗೂ ಪರಮಾಣು ಬಾಂಬ್‌ಗಳು ಮತ್ತು ಕ್ಷಿಪಣಿಗಳಿಂದ ಸಜ್ಜಿತ ವ್ಯೂಹಾತ್ಮಕ ವಿಮಾನಗಳನ್ನು ಒಳಗೊಂಡಿರುತ್ತದೆ. ಈ ನಡುವೆ ಉಕ್ರೇನ್‌ನಾದ್ಯಂತ ಭಾರೀ ಕಾಳಗ ಮತ್ತು ವಾಯುದಾಳಿಗಳು ಸೊಮವಾರವೂ ಮುಂದುವರಿದಿವೆ.

ರವಿವಾರ ಪುಟಿನ್ ಅವರು,ಪರಮಾಣು ನಿರೋಧಕ ಪಡೆಗಳನ್ನು ವಿಶೇಷ ಹೋರಾಟ ಕರ್ತವ್ಯಕ್ಕೆ ಅಣಿಗೊಳಿಸುವಂತೆ ಮತ್ತು ಕಟ್ಟೆಚ್ಚರದಲ್ಲಿ ಇರಿಸುವಂತೆ ತನ್ನ ರಕ್ಷಣಾ ಸಚಿವರು ಮತ್ತು ಮಿಲಿಟರಿ ಮುಖ್ಯಸ್ಥರಿಗೆ ನಿರ್ದೇಶ ನೀಡಿದ್ದು,ಇದು ಉದ್ವಿಗ್ನತೆಯನ್ನು ತೀವ್ರವಾಗಿ ಹೆಚ್ಚಿಸಿದೆ.

ಪುಟಿನ್ ಕ್ರಮಕ್ಕೆ ಉಕ್ರೇನ್‌ನ ಪಾಶ್ಚಾತ್ಯ ಮಿತ್ರರಾಷ್ಟ್ರಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಇದೇ ವೇಳೆ ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯು ಉಕ್ರೇನ್ ಉದ್ವಿಗ್ನತೆಯನ್ನು ಚರ್ಚಿಸಲು ತುರ್ತು ಸಭೆಯನ್ನು ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News