×
Ad

ಉಕ್ರೇನ್ ನ ಖೆರ್ಸನ್ ನಗರ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ: ರಶ್ಯ ಸೇನೆ

Update: 2022-03-02 15:37 IST
ಸಾಂದರ್ಭಿಕ ಚಿತ್ರ

ಕೀವ್: ಉಕ್ರೇನ್‌ನ ದಕ್ಷಿಣದಲ್ಲಿರುವ ಖೆರ್ಸನ್‌ ನಗರವನ್ನು  ನಿಯಂತ್ರಣಕ್ಕೆ  ತೆಗೆದುಕೊಂಡಿದ್ದೇವೆ ಎಂದು ರಶ್ಯದ ಸೇನೆಯು ಹೇಳಿಕೊಂಡಿದೆ.

"ರಶ್ಯದ ಸಶಸ್ತ್ರ ಪಡೆಗಳು ಖರ್ಸನ್ ಪ್ರಾದೇಶಿಕ ಕೇಂದ್ರವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ದೂರದರ್ಶನದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಮೆರಿಕದ  ವಾಯುಪ್ರದೇಶವನ್ನು ಬಳಸದಂತೆ ರಷ್ಯಾದ ವಿಮಾನಗಳ ಮೇಲೆ ನಿಷೇಧವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಘೋಷಿಸಿದರು. ಉಕ್ರೇನ್ ಆಕ್ರಮಣದ ನಂತರ ಕೆನಡಾ ಇತರ  ಹಲವಾರು ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ರಷ್ಯಾದ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News