ಕೆರೆಗೆ ಬಿದ್ದು ಮಹಿಳೆ ಮೃತ್ಯು
Update: 2022-03-02 21:16 IST
ಗಂಗೊಳ್ಳಿ, ಮಾ.2: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾ.1ರಂದು ಮಧ್ಯಾಹ್ನ ವೇಳೆ ಸೇನಾಪುರ ಗ್ರಾಮದ ಸರ್ಗೇರ್ ಎಂಬಲ್ಲಿ ನಡೆದಿದೆ.
ಮೃತರನ್ನು ಸೇನಾಪುರ ಗ್ರಾಮದ ಸರ್ಗೇರ್ ನಿವಾಸಿ ರುಕ್ಮೀಣಿ (49) ಎಂದು ಗುರುತಿಸಲಾಗಿದೆ. ಇವರು ಮನೆಯ ಬಳಿಯ ತೋಟದಲ್ಲಿನ ಕೆರೆಯಲ್ಲಿ ಬಿದ್ದಿದ್ದ ತೆಂಗಿನ ಕಾಯಿಯನ್ನು ಕೊಕ್ಕೆಯಿಂದ ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.