ಉಕ್ರೇನ್ ಜತೆ ಸಂಘರ್ಷ: ಫೇಸ್‌ಬುಕ್ ನಿಷೇಧ, ಟ್ವಿಟ್ಟರ್ ಲಭ್ಯತೆ ನಿರ್ಬಂಧಿಸಿದ ರಷ್ಯಾ

Update: 2022-03-05 01:55 GMT
photo: AP/PTI

ಮಾಸ್ಕೊ: ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ ರಷ್ಯಾ ಶುಕ್ರವಾರ ದೇಶದಲ್ಲಿ ಫೇಸ್‌ಬುಕ್ ನಿಷೇಧಿಸಿದ್ದು, ಟ್ವಿಟ್ಟರ್‌ನ ಲಭ್ಯತೆಯನ್ನು ಸೀಮಿತಗೊಳಿಸುವ ಸಂಬಂಧ ಹಲವು ನಿರ್ಬಂಧ ಕ್ರಮಗಳನ್ನು ಪ್ರಕಟಿಸಿದೆ. ಕ್ರೆಮ್ಲಿನ್, ಉಕ್ರೇನ್‌ನ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ನಕಲಿ ಸುದ್ದಿ ಹರಡುತ್ತಿರುವ ಆರೋಪದಲ್ಲಿ ಈ ಸಾಮಾಜಿಕ ಜಾಲತಾಣಗಳ ನಿರ್ಬಂಧಕ್ಕೆ ರಷ್ಯಾ ಮುಂದಾಗಿದೆ.

ರಷ್ಯನ್ ಸೇನೆಯ ವಿರುದ್ಧ ಸುಳ್ಳು ಸುದ್ದಿ ಹರಡುವವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಗೆ ಪುಟಿನ್ ಸಹಿ ಮಾಡಿದ್ದಾರೆ. ಉಕ್ರೇನ್ ಸಂಘರ್ಷವನ್ನು ಯುದ್ಧ ಎಂದು ಬಿಂಬಿಸುತ್ತಿರುವ ಬಗ್ಗೆ ರಷ್ಯಾ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದನ್ನು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆಯುವಂತೆ ಸೂಚಿಸಿದೆ.

"ಶೀಘ್ರವೇ ಲಕ್ಷಾಂತರ ರಷ್ಯನ್ನರಿಗೆ ವಿಶ್ವಾಸಾರ್ಹ ಮಾಹಿತಿ ಲಭ್ಯತೆ ಕಡಿತವಾಗಲಿದೆ. ತಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆ ದೈನಂದಿನ ಸಂಪರ್ಕ ಕಡಿತಗೊಳ್ಳಲಿದೆ ಮತ್ತು ಇವರು ಮಾತನಾಡದಂತೆ ದಮನಿಸಲಾಗುತ್ತಿದೆ. ನಮ್ಮ ಸೇವೆಗಳನ್ನು ಪುನರಾರಂಭಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ. ಈ ಮೂಲಕ ಜನರಿಗೆ ಸುರಕ್ಷಿತವಾಗಿ ಹಾಗೂ ಸುಭದ್ರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಕ್ರಮಗಳನ್ನು ಸಂಘಟಿಸಲು ಸಾಧ್ಯವಾಗಲಿದೆ" ಎಂದು ಮೆಟಾ ಜಾಗತಿಕ ವ್ಯವಹಾರಗಳ ವಿಭಾಗದ ಅಧ್ಯಕ್ಷ ನಿಕ್ ಕ್ಲೆಗ್ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿ ಗಂಭೀರ ಪರಿಣಾಮಗಳಿಗೆ ಕಾರಣವಾದರೆ ಈ ಶಾಸನ 15 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುತ್ತದೆ ಎಂದು ರಷ್ಯಾದ ಕೆಳಮನೆ ಹೇಳಿಕೆ ನೀಡಿದೆ. ಈ ಕಾನೂನು ಜಾರಿಗೆ ಬಂದ ತಕ್ಷಣವೇ ಬಿಬಿಸಿ ತಾತ್ಕಾಲಿಕವಾಗಿ ರಷ್ಯಾದಲ್ಲಿ ತನ್ನ ಪತ್ರಕರ್ತರು ಕಾರ್ಯ ನಿರ್ವಹಿಸಿದಂತೆ ಸೂಚಿಸಿದೆ. ಈ ಕಾನೂನು ಸ್ವತಂತ್ರ ಪತ್ರಿಕೋದ್ಯಮ ಪ್ರಕ್ರಿಯೆಯನ್ನು ಅಪರಾಧಕರಣಗೊಳಿಸುವಂತಿದೆ ಎಂದು ಬಿಬಿಸಿ ಪ್ರತಿಕ್ರಿಸಿಯಿಸಿದೆ.

ಜರ್ಮನಿಯ ಪ್ರಸಾರ ಮೆಡೂಝಾ ಮತ್ತು ಅಮೆರಿಕ ನೆರವಿನ ರೇಡಿಯೊ ಫ್ರೀ ಯೂರೋಪ್/ ರೇಡಿಯೊ ಲಿಬರ್ಟಿ, ಸ್ಲೊಬೊಡಾ ಸೇರಿದಂತೆ ಇತರ ಹಲವು ಸುದ್ದಿವಾಹಿನಿಗಳು ಮತ್ತು ವೆಬ್‌ಸೈಟ್‌ಗಳು ಕೂಡಾ ಕಾರ್ಯಾಚರಣೆ ಸ್ಥಗಿತಗೊಳಿಸವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News