ಸೈಬರ್ ದಾಳಿಯಿಂದ ಯುರೋಪ್‍ನಲ್ಲಿ ಸಾವಿರಾರು ಮಂದಿಯ ಇಂಟರ್ನೆಟ್ ಸೇವೆ ಬಾಧಿತ; ವರದಿ

Update: 2022-03-05 05:51 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್: ಉಕ್ರೇನ್ ಮೇಲೆ ರಶ್ಯಾದ ಆಕ್ರಮಣ ಆರಂಭವಾದ ಬೆನ್ನಲ್ಲೇ ಯುರೋಪ್‍ನಾದ್ಯಂತ ಸೈಬರ್ ದಾಳಿಯಿಂದಾಗಿ ಸಾವಿರಾರು ಇಂಟರ್ನೆಟ್ ಬಳಕೆದಾರರಿಗೆ ಅಂತರ್ಜಾಲ ಸಂಪರ್ಕ ದೊರೆಯದೆ ಸಮಸ್ಯೆ ಎದುರಾಗಿದೆ ಎಂದು ವರದಿಯಾಗಿದೆ.

ಉಪಗ್ರಹ ಇಂಟರ್ನೆಟ್ ಸೇವೆ ಒದಗಿಸುವ ಆರೆಂಜ್ ಸಂಸ್ಥೆಯ ಉಪಸಂಸ್ಥೆ ಫ್ರಾನ್ಸ್ ದೇಶದ ನಾರ್ಡ್‍ನೆಟ್‍ನ ಸುಮಾರು 9000 ಚಂದಾದಾರರು ಅಂತರ್ಜಾಲ ಸೇವೆಯಿಂದ ಕಡಿತಗೊಂಡಿದ್ದಾರೆ. ಅಮೆರಿಕಾದ ಸ್ಯಾಟಿಲೈಟ್ ಆಪರೇಟರ್ ವಿಯಾಸತ್‍ನಲ್ಲಿ ಫೆಬ್ರವರಿ 24ರಂದು ನಡೆದ 'ಸೈಬರ್ ದಾಳಿ' ಇದಕ್ಕೆ ಕಾರಣವೆನ್ನಲಾಗಿದೆ.

ಬಿಗ್‍ಬ್ಲು ಉಪಗ್ರಹ ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಯ ಮಾತೃಸಂಸ್ಥೆಯಾಗಿರುವ ಯುಟೆಲ್ಸಾಟ್ ಕೂಡ ಬಿಗ್‍ಬ್ಲೂ ಸಂಸ್ಥೆಯ ಜರ್ಮನಿ, ಫ್ರಾನ್ಸ್, ಹಂಗೆರಿ, ಗ್ರೀಸ್, ಇಟಲಿ, ಪೋಲ್ಯಾಂಡ್ ದೇಶಗಳ ಸುಮಾರು 40,000 ಚಂದಾದಾರರು ಬಾಧಿತರಾಗಿದ್ದಾರೆ ಎಂದು ತಿಳಿಸಿದೆ.

ಉಕ್ರೇನ್ ಮತ್ತು ಯುರೋಪ್‍ನ ಕೆಲವೆಡೆ ಕೆಎ-ಎಸ್‍ಎಟಿ ಸ್ಯಾಟಿಲೈಟ್ ಸೇವೆಯನ್ನು ಅವಲಂಬಿಸಿರುವ ಗ್ರಾಹಕರು ಇಂಟರ್ನೆಟ್ ಸೇವೆಯಲ್ಲಿ ಭಾಗಶಃ ವ್ಯತ್ಯಯವೆದುರಿಸಿದ್ದಾರೆ ಎಂದು ವಿಯಾಸತ್ ಹೇಳಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿರುವ ಸಂಸ್ಥೆ ಹೆಚ್ಚಿನ ಮಾಹಿತಿ ಒದಗಿಸಿಲ್ಲ.

ಸೈಬರ್ ದಾಳಿಯಾಗಿದೆ ಎಂದು ಫ್ರಾನ್ಸ್ ದೇಶದ ಸ್ಪೇಸ್ ಕಮಾಂಡ್ ಅಧ್ಯಕ್ಷ ಜನರಲ್ ಮೈಕೆಲ್ ಫ್ರೀಡ್ಲಿಂಗ್ ಹೇಳಿದ್ದಾರೆ.

ಸೈಬರ್ ದಾಳಿಯಿಂದಾಗಿ ಜರ್ಮನಿ ಮತ್ತು ಮಧ್ಯ ಯುರೋಪ್‍ನ ಸುಮಾರು 5,800 ಪವನ ಯಂತ್ರಗಳ ಕಾರ್ಯಾಚರಣೆಯೂ ಬಾಧಿತವಾಗಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News