×
Ad

ಉಕ್ರೇನ್ ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

Update: 2022-03-05 12:23 IST
Photo: PTI

ಮಾಸ್ಕೊ: ನಾಗರಿಕರಿಗೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು  ಉಕ್ರೇನ್‌ನಲ್ಲಿ  ತಾತ್ಕಾಲಿಕ ರಷ್ಯಾ ಕದನ ವಿರಾಮವನ್ನು ಘೋಷಿಸಿದೆ ಎಂದು ರಷ್ಯಾದ ಮಾಧ್ಯಮ ಸ್ಪುಟ್ನಿಕ್ ವರದಿ ಮಾಡಿದೆ.

ರಷ್ಯಾ ಮುತ್ತಿಗೆ ಹಾಕಿರುವ ಉಕ್ರೇನಿಯನ್ ನಗರಗಳಾದ ಮರಿಯುಪೋಲ್ ಮತ್ತು ವೊಲ್ನೋವಾಖಾದಿಂದ ನಾಗರಿಕರನ್ನು ಸ್ಥಳಾಂತರಿಸಲು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ಕದನ ವಿರಾಮವನ್ನು ಘೋಷಿಸಿದೆ ಎಂದು ವರದಿಯಾಗಿದೆ. 

ಇಂದು, ಮಾರ್ಚ್‌ 5, ಮಾಸ್ಕೋ ಕಾಲಮಾನ ಬೆಳಗ್ಗೆ 10 ರಿಂದ, ಮರಿಯುಪೋಲ್ ಮತ್ತು ವೊಲ್ನೋವಾಖಾ ನಿವಾಸಿಗಳು ನಗರ ತೊರೆಯಲು ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News