×
Ad

ಎಲ್ಲಿಗೂ ಓಡಿ ಹೋಗಿಲ್ಲ, ನಾನು ಕೀವ್‌ನಲ್ಲೇ ಇದ್ದೇನೆ: ಉಕ್ರೇನ್ ಅಧ್ಯಕ್ಷರ ವೀಡಿಯೊ ಸಂದೇಶ

Update: 2022-03-05 23:12 IST
photo courtesy:twitter

ಕೀವ್‌: ನಾನಿನ್ನೂ ಉಕ್ರೇನ್ ರಾಜಧಾನಿ ಕೀವ್‌ ನಗರದಲ್ಲೇ ಇದ್ದೇನೆ. ಯಾರೊಬ್ಬರೂ ಎಲ್ಲಿಗೂ ಪಲಾಯನ ಮಾಡಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಶನಿವಾರ ವೀಡಿಯೊ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಝೆಲೆಂಸ್ಕಿಕೀವ್‌ ನಗರದಿಂದ ಪಲಾಯನ ಮಾಡಿದ್ದು ಪೋಲಂಡ್ ತಲುಪಿದ್ದಾರೆ ಎಂದು ರಷ್ಯಾದ ಸಂಸತ್ತಿನ ಸ್ಪೀಕರ್ ವ್ಯಾಶಲೆವ್ ವೊಲೊಡಿನ್‌ರನ್ನು ಉಲ್ಲೇಖಿಸಿ ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮ ‘ಸ್ಪುಟ್ನಿಕ್’  ವರದಿ ಮಾಡಿತ್ತು.

ಇದಕ್ಕೆ ಉತ್ತರವಾಗಿ ವೀಡಿಯೊ ಸಂದೇಶ ಮಾಡಿರುವ ಝೆಲೆಂಸ್ಕಿ, ತಾನು ಕೀವ್‌ ನಗರದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಝೆಲೆಂಸ್ಕಿ, ರಷ್ಯಾದ ಆಕ್ರಮಣದ ಬಳಿಕ ಹೊರಜಗತ್ತಿನೊಂದಿಗೆ ವೀಡಿಯೊ ಮತ್ತು ಟ್ವೀಟ್ ಮೂಲಕ ಸಂವಹನ ನಡೆಸುತ್ತಿದ್ದಾರೆ. 

ಉಕ್ರೇನ್‌ನ ವಾಯುವ್ಯಾಪ್ತಿಯಲ್ಲಿ ವಿಮಾನ ಪ್ರಯಾಣ ನಿಷೇಧ ಜಾರಿಗೆ ಹಿಂಜರಿಯುತ್ತಿರುವ ನ್ಯಾಟೊ ರಾಷ್ಟ್ರಗಳನ್ನು ತೀವ್ರವಾಗಿ ಟೀಕಿಸಿರುವ ಅವರು, ಇದರಿಂದ ರಷ್ಯಾದ ವಾಯುದಾಳಿಗೆ ಅನುಕೂಲವಾಗಿದೆ ಎಂದಿದ್ದಾರೆ. 

ವಿಮಾನ ಪ್ರಯಾಣ ನಿಷೇಧ ವಿಧಿಸಿದರೆ ಯುರೋಪಿನಾದ್ಯಂತ ಯುದ್ಧ ವಿಸ್ತರಿಸಬಹುದು ಎಂದು ನ್ಯಾಟೊ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News