ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕನ ರಕ್ಷಣೆ
Update: 2022-03-06 22:06 IST
ಉಡುಪಿ, ಮಾ.6: ಶ್ರೀಕೃಷ್ಣ ಮಠದ ಪರಿಸರದಲ್ಲಿ ರವಿವಾರ ಅಸಹಾಯಕ ಸ್ಥಿತಿಯಲ್ಲಿದ್ದ, ಅಪರಿಚಿತ ಬಾಲಕನನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪೋಲಿಸರ ಸಹಕಾರದಿಂದ ರಕ್ಷಿಸಿ, ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಬಾಲಕನನ್ನು ಆಂದ್ರಪ್ರದೇಶದ ಅನಂತಪುರದ ರಮಣಮೂರ್ತಿ ಎಂಬವರ ಮಗ ಜೆ.ಕೆ.ನಿತಿನ್ ಎಂದು ಗುರುತಿಸಲಾಗಿದೆ. ತಂದೆ ತಾಯಿಯೊಂದಿಗೆ ಯಾತ್ರರ್ಥಿಯಾಗಿ ಉಡುಪಿಗೆ ಬಂದಿದ್ದ ಇವರು, ಅವರಿಂದ ತಪ್ಪಿಸಿಕೊಂಡಿರುವು ದಾಗಿ ಹೇಳಿಕೊಂಡಿದ್ದಾನೆ. ಸಂಬಂಧಿಕರು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು(91649 01111) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಈ ಕಾರ್ಯಾಚರಣೆಗೆ ವಿನಯಚಂದ್ರ ಸಾಸ್ತಾನ ಹಾಗೂ ಮಠದ ರಕ್ಷಣಾ ಸಿಬ್ಬಂದಿ ನೆರವಾಗಿದ್ದಾರೆ.