×
Ad

ಕಾರ್ಕಳ ಉತ್ಸವ ಮಹಾ ಸ್ವಚ್ಚತಾ ಅಭಿಯಾನ

Update: 2022-03-06 23:07 IST

ಕಾರ್ಕಳ: ಕಾರ್ಕಳ ಉತ್ಸವಕ್ಕೆ ದಿನಗಳು ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಸ್ರಾಾರು ಮಂದಿ ಕಾರ್ಕಳ ಉತ್ಸವದ ಯಶಸ್ವಿಗಾಗಿ ತಂಡೋಪತಂಡವಾಗಿ ಹಗಲಿರುಳು ಸಿದ್ಧತೆಯಲ್ಲಿ ತೊಡಗಿದ್ದಾಾರೆ. ಪೂರ್ವಭಾವಿಯಾಗಿ ರವಿವಾರ ನಡೆದ ಉತ್ಸವ ಸ್ವಚ್ಛತೆ ವಿಶೇಷ ಸ್ವಚ್ಛತಾ ಮಹಾ ಅಭಿಯಾನದಲ್ಲಿ ಹಲವರು ಭಾಗವಹಿಸಿದ್ದರು.

ತಾಲೂಕಿನಾದ್ಯಂತ ಗ್ರಾಾಮಗಳಿಂದ ಬಂದಿದ್ದ ಸ್ವಯಂ ಸೇವಕರು, ರಸ್ತೆ ಬದಿ, ಪರಿಸರದಲ್ಲಿ ಬಿದ್ದಿದ್ದ ಕಸ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಇತರೆ ವಸ್ತುಗಳು ಇನ್ನಿತರ  ಕಸಗಳನ್ನು ಹೆಕ್ಕಿದರು. ರಸ್ತೆ ಬದಿಗಳ ಗೋಡೆ, ಮೋರಿಗಳಿಗೆ ಸುಣ್ಣ ಬಣ್ಣ ಬಳಿದು ಆಕರ್ಷಕ ವರ್ಣ ಚಿತ್ರ ಬಿಡಿಸಿ ನಗರದ ಅಂದ-ಚೆಂದ ಹೆಚ್ಚಿಸಿದರು.

ಸಚಿವ ಸುನಿಲ್ ಕುಮಾರ್ ವರ್ಣ ಚಿತ್ರ ಬರೆದರೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಕಸ ಹೆಕ್ಕಿ ಮಾದರಿಯಾದರು. ಅಧಿಕಾರಿಗಳು, ಸಿಬಂದಿಗಳು ಕೈಜೋಡಿಸಿದರು. ಪುರಸಭೆ, ಗ್ರಾ.ಪಂ. ಪೌರ ಕಾರ್ಮಿಕರು ಸಿಬಂದಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು, ಕೈ ಜೋಡಿಸಿದರು.

ಒಟ್ಟಿನಲ್ಲಿ ಕಾರ್ಕಳ ಉತ್ಸವಕ್ಕೆ ಇನ್ನು ಕೆಲವೇ ದಿನಗಳಿರುವಾಗ ಆ ಮೊದಲೆ ನಗರ ಸ್ವಚ್ಛಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News