×
Ad

ಅಮೆರಿಕ: ಭೀಕರ ಸುಂಟರಗಾಳಿ; ಕನಿಷ್ಟ 6 ಮಂದಿ ಮೃತ್ಯು

Update: 2022-03-06 23:48 IST
photo pti

ವಾಷಿಂಗ್ಟನ್, ಮಾ.6: ಅಮೆರಿಕದ ಲೋವ ರಾಜ್ಯದ ಮ್ಯಾಡಿಸನ್ ನಗರಕ್ಕೆ ಶನಿವಾರ ಅಪ್ಪಳಿಸಿದ ಭೀಕರ ಸುಂಟರಗಾಳಿಯಿಂದ ಇಬ್ಬರು ಮಕ್ಕಳ ಸಹಿತ 6 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ದಿನದಲ್ಲಿ ವರದಿಯಾಗಿರುವ ಅತೀ ಭೀಕರ ಸುಂಟರಗಾಳಿ ಇದಾಗಿದ್ದು ಇದರ ಪರಿಣಾಮ ಸುದೀರ್ಘಾವಧಿವರೆಗೆ ಇರಲಿದೆ. ಸುಂಟರಗಾಳಿಯಿಂದ 6 ಮಂದಿ ಮೃತಪಟ್ಟಿದ್ದು ವ್ಯಾಪಕ ಪ್ರಮಾಣದಲ್ಲಿ ಮನೆ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ. ಸುಂಟರಗಾಳಿಯಿಂದ ಇನ್ನಷ್ಟು ಮಂದಿ ತೊಂದರೆಗೆ ಸಿಲುಕಿರುವ ಶಂಕೆಯಿದ್ದು ರಾತ್ರಿಯೂ ಶೋಧ ಮತ್ತು ರಕ್ಷಣೆ ಕಾರ್ಯ ಮುಂದುವರಿಯಲಿದೆ ಎಂದು ನಗರದ ತುರ್ತು ಪರಿಸ್ಥಿತಿ ನಿರ್ವಹಣಾ ಕೇಂದ್ರದ ನಿರ್ದೇಶಕ ಡಯೊಗೆನೆಸ್ ಅಯಾಲಾ ಹೇಳಿದ್ದಾರೆ.

ಸುಂಟರಗಾಳಿ ಈಗ ಕೇಂದ್ರ ಮ್ಯಾಡಿಸನ್ ನಗರವನ್ನು ದಾಟಿ ಪೂರ್ವದತ್ತ ಮುಂದುವರಿದಿದೆ ಎಂದು ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ಟ್ವೀಟ್ ಮಾಡಿದೆ. ಸುಂಟರಗಾಳಿಯಿಂದ ಸಂತ್ರಸ್ತರಾದವರಿಗೆ ನೆರವಾಗಲು ಸ್ಥಳೀಯ ಆಡಳಿತದ ಹಣವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಲೋವ ನಗರದ ಗವರ್ನರ್ ಕಿಮ್ ರೆನಾಲ್ಡ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News