ವಂಚನೆ ಪ್ರಕರಣ: ಎನ್ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಬಂಧನ
Update: 2022-03-07 09:29 IST
ಹೊಸದಿಲ್ಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ)ಯ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ರವಿವಾರ ಬಂಧಿಸಿದೆ. ಚಿತ್ರಾ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಸಿಬಿಐ ಕೆಂದ್ರ ಕಚೇರಿಯ ಲಾಕಪ್‌ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಚಿತ್ರಾ ಅವರು ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳು, ಲಾಭಾಂಶ ವಿವರಗಳು ಮತ್ತು ಹಣಕಾಸು ಫಲಿತಾಂಶಗಳು ಸೇರಿದಂತೆ ಕೆಲವು ಆಂತರಿಕ ರಹಸ್ಯ ಮಾಹಿತಿಗಳನ್ನು ಹಿಮಾಲಯದ ಯೋಗಿಯೊಂದಿಗೆ ಹಂಚಿಕೊಂಡಿದ್ದರು ಮತ್ತು ಎನ್‌ಎಸ್‌ಇ ಉದ್ಯೋಗಿಗಳ ಕಾರ್ಯ ನಿರ್ವಹಣೆ ಮೌಲ್ಯಮಾಪನದ ಬಗ್ಗೆ ಅವರೊಂದಿಗೆ ಸಮಾಲೋಚಿಸಿದ್ದರು ಎಂದು ಆರೋಪಿದ್ದರು.
ಸೂಕ್ಷ್ಮ ಮಾಹಿತಿಗಳನ್ನು ಕಂಪನಿಯೊಂದಕ್ಕೆ ನೀಡಿದ ಆರೋಪವನ್ನು ಚಿತ್ರಾ ಮತ್ತು ಎನ್‌ಎಸ್‌ಇಯ ಇತರ ಅಧಿಕಾರಿಗಳು ಎದುರಿಸುತ್ತಿದ್ದಾರೆ.