16 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಬರೆದ ಬುಶ್ರಾ ಮತೀನ್‌ ರನ್ನು ಅಭಿನಂದಿಸಿದ ಸ್ವರಾ ಭಾಸ್ಕರ್‌

Update: 2022-03-07 07:00 GMT
Photo: Twitter

ಹೊಸದಿಲ್ಲಿ: ಎಸ್‌ಎಲ್‌ಎನ್‌ ಕಾಲೇಜಿನ ವಿದ್ಯಾರ್ಥಿನಿ ರಾಯಚೂರಿನ ಬುಶ್ರಾ ಮತೀನ್‌ ವಿಟಿಯು ಇತಿಹಾಸದಲ್ಲೇ ೧೬ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಹಿಜಾಬ್‌ಧಾರಿ ವಿದ್ಯಾರ್ಥಿನಿಯ ಈ ಸಾಧದನೆಗೆ ದೇಶದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಹಾಗೂ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಟ್ವೀಟ್‌ ಮಾಡಿ, ಅಭಿನಂದಿಸಿದ್ದಾರೆ.

ತಮ್ಮ ಖಾತೆಯಲ್ಲಿ ಬುಶ್ರಾ ಮತೀನ್‌ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೊವನ್ನು ಟ್ವೀಟ್‌ ಮಾಡಿದ ಅವರು, "ಅಭಿನಂದನೆಗಳು ಬುಶ್ರಾ...  ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾಧನೆ ಹಾಗೂ #ಹಿಜಾಬ್ ಪರಸ್ಪರ ಪ್ರತ್ಯೇಕವಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ನಮ್ಮ ಪೂರ್ವಾಗ್ರಹಗಳಿಂದ ನಾವು ‘ವಿಮೋಚನೆ’ ಪಡೆಯಬೇಕೇ?" ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News