×
Ad

ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಭಾರತದ ಆತಂಕದ ನಡುವೆ ಕದನ ವಿರಾಮ ಘೋಷಿಸಿದ ರಷ್ಯಾ

Update: 2022-03-08 10:29 IST
Photo Credit: AP

ಹೊಸದಿಲ್ಲಿ: "ಮಾನವೀಯ ಕಾರ್ಯಾಚರಣೆ" ನಡೆಸಲು ಭಾರತ ಕಾಲಮಾನ ಮಧ್ಯಾಹ್ನ 12:30ಕ್ಕೆ ರಷ್ಯಾ ಇಂದು ಕದನ ವಿರಾಮ ಘೋಷಿಸಿದೆ.

ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯು "ಮಾನವೀಯ ಕಾರಿಡಾರ್" ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದನ್ನು ಒದಗಿಸಲು ಸಿದ್ಧವಾಗಿದೆ. ಇದು ಈಶಾನ್ಯ ಉಕ್ರೇನ್‌ನ ಸುಮಿ ನಗರದ ಕಾರಿಡಾರ್‌ಗಳನ್ನು ಒಳಗೊಂಡಿದೆ. ಸುಮಿ ನಗರದಲ್ಲಿ ಸುಮಾರು 600 ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಮತ್ತು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಹೊರಹೋಗಲು ಅವರಿಗೆ ಸಾಧ್ಯವಾಗಲಿಲ್ಲ.

ನಿನ್ನೆ ನಡೆದ ಉಕ್ರೇನ್ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಈ ವಿಷಯವನ್ನು ಪ್ರಸ್ತಾಪಿಸಿತ್ತು.

ರಷ್ಯಾ ಹಾಗೂ  ಉಕ್ರೇನ್ ಎರಡಕ್ಕೂ ನಮ್ಮ ಪುನರಾವರ್ತಿತ ಒತ್ತಾಯದ ಹೊರತಾಗಿಯೂ ಭಾರತವು ತೀವ್ರ  ಕಳವಳವನ್ನು ಹೊಂದಿದೆ.  ಸುಮಿಯಲ್ಲಿ ಸಿಲುಕಿರುವ  ನಮ್ಮ ವಿದ್ಯಾರ್ಥಿಗಳಿಗೆ “ಸುರಕ್ಷಿತ ಕಾರಿಡಾರ್’’ ಕಾರ್ಯರೂಪಕ್ಕೆ ಬರಲಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ  ಭಾರತದ ಖಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಟಿಎಸ್ ತಿರುಮೂರ್ತಿಹೇಳಿದ್ದರು.

"ಮಾರ್ಚ್ 8, 2022 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 12.30 ರಿಂದ ಮಾನವೀಯ ಕಾರ್ಯಾಚರಣೆಯನ್ನು ನಡೆಸಲು ರಷ್ಯಾ ಕದನ ವಿರಾಮವನ್ನು ಘೋಷಿಸುತ್ತದೆ ಹಾಗೂ  ಮಾನವೀಯ ಕಾರಿಡಾರ್‌ಗಳನ್ನು ಒದಗಿಸಲು ಸಿದ್ಧವಾಗಿದೆ" ಎಂದು ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News