×
Ad

ಉಕ್ರೇನ್‌ ನಲ್ಲಿ ತನ್ನನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸಿದ ಪಾಕ್ ವಿದ್ಯಾರ್ಥಿನಿ

Update: 2022-03-09 10:40 IST

ಕೀವ್: ರಷ್ಯಾ ಹಾಗೂ  ಉಕ್ರೇನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಯುದ್ಧ ಪೀಡಿತ ದೇಶದಲ್ಲಿ ಸಿಲುಕಿಕೊಂಡಿದ್ದ ಪಾಕಿಸ್ತಾನಿ ವಿದ್ಯಾರ್ಥಿಯನ್ನು ಭಾರತೀಯ ಅಧಿಕಾರಿಗಳು ರಕ್ಷಿಸಿದ್ದಾರೆ.

ಮೂಲಗಳ ಪ್ರಕಾರ, ಭಾರತೀಯ ಅಧಿಕಾರಿಗಳಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನದ ಅಸ್ಮಾ ಶಫೀಕ್ ಈಗ ಆ ದೇಶದಿಂದ ಸಂಪೂರ್ಣ ಸ್ಥಳಾಂತರವಾಗಲು  ಪಶ್ಚಿಮ ಉಕ್ರೇನ್‌ಗೆ ತೆರಳುತ್ತಿದ್ದಾರೆ.

ಶೀಘ್ರದಲ್ಲೇ ಅವರು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಅಧಿಕಾರಿಗಳು ಅಸ್ಮಾ ರನ್ನು ರಕ್ಷಿಸಿದ ನಂತರ, ಅವರು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ತನಗೆ ನೆರವು ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.

"ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾಗ ಇಲ್ಲಿಯವರೆಗೆ ನಮಗೆ  ನೆರವು ನೀಡಿದ್ದಕ್ಕಾಗಿ ಕೀವ್‌ನ ಭಾರತೀಯ ರಾಯಭಾರ ಕಚೇರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಹಾಗೂ  ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಾನು ಭಾರತದ ಪ್ರಧಾನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತೀಯ ರಾಯಭಾರ ಕಚೇರಿ ಯಿಂದಾಗಿ ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತೇವೆ’ ಎಂದು ಭಾವಿಸುತ್ತೇವೆ’’ ಅವರು ಹೇಳಿದರು.

ವಿದೇಶಿ ಪ್ರಜೆಯನ್ನು ಭಾರತ ರಕ್ಷಿಸಿದ್ದು ಇದೇ ಮೊದಲಲ್ಲ. ಈ ಹಿಂದೆ, ಭಾರತವು ಒಬ್ಬ ಬಾಂಗ್ಲಾದೇಶದ ಪ್ರಜೆಯನ್ನು ಸ್ಥಳಾಂತರಿಸಿತ್ತು.  ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಒಬ್ಬ ನೇಪಾಳಿ ಪ್ರಜೆಯು ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯ ವಿಮಾನದಲ್ಲಿ ಬರಲಿದ್ದಾರೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News