ಪಶ್ಚಿಮಬಂಗಾಳ: ರಾಜ್ಯಪಾಲರ ಭಾಷಣದ ಸಂದರ್ಭ ಗದ್ದಲವೆಬ್ಬಿಸಿದ ಇಬ್ಬರು ಬಿಜೆಪಿ ಶಾಸಕರ ಅಮಾನತು

Update: 2022-03-09 18:32 GMT

ಕೋಲ್ಕತಾ, ಮಾ. 9: ಸದನದಲ್ಲಿ ರಾಜ್ಯಪಾಲ ಜಗದೀಶ್ ಧಂಖರ್ ಅವರು ಉದ್ಘಾಟನಾ ಭಾಷಣ ಮಾಡುವ ಸಂದರ್ಭ ಗದ್ದಲ ಸೃಷ್ಟಿಸಿದ ಬಿಜೆಪಿಯ ಶಾಸಕರಾದ ಸುದೀಪ್ ಮುಖ್ಯೋಪಾಧ್ಯಾಯ ಮುತ್ತ ಮಿಹಿರ್ ಗೋಸ್ವಾಮಿ ಅವರನ್ನು ಬುಧವಾರ ಪಶ್ಚಿಮಬಂಗಾಳ ವಿಧಾನ ಸಭೆಯ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಭಾಗವಹಿಸದಂತೆ ಅಮಾನತು ಮಾಡಲಾಗಿದೆ.

ಸಂಸದೀಯ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಪಾರ್ಥಾ ಚಟರ್ಜಿ ಬಿಜೆಪಿ ಶಾಸಕರನ್ನು ಪ್ರಸಕ್ತ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವಂತೆ ನಿಲುವಳಿ ಮಂಡಿಸಿದರು. ಅದನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಮತಕ್ಕೆ ಹಾಕಿದರು. ವಿಧಾನ ಸಭೆಯಲ್ಲಿ ನಿಲುವಳಿ ಮಂಡಿಸುವ ವೇಳೆ ಚಟರ್ಜಿ ಅವರು, ನಟಬಾರಿಯ ಶಾಸಕ ಗೋಸ್ವಾಮಿ ಮತ್ತು ಪುರುಲಿಯಾ ಶಾಸಕ ಮುಖ್ಯೋಪಾಧ್ಯಾಯ ಅವರು ಮಾರ್ಚ್ 7ರಂದು ರಾಜ್ಯಪಾಲರ ಭಾಷಣದ ವೇಳೆ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪದರ್ಶಿಸಿ ಗದ್ದಲ ಉಂಟು ಮಾಡಿದ್ದಾರೆ ಎಂದು ತಿಳಿದರು. ನಿಲುವಳಿಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅಂದು ವಿರೋಧ ಪಕ್ಷ ಬಿಜೆಪಿ ಸೃಷಿಸಿದ ಗದ್ದಲದ ನಡುವೆಯೂ ರಾಜ್ಯಪಾಲರು ತಮ್ಮ ಭಾಷಣದ ಮೊದಲ ಮತ್ತು ಕೊನೆಯ ಸಾಲುಗಳನ್ನು ಓದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News