ಜಮ್ಮು ಕಾಶ್ಮೀರ: ಜಿಲ್ಲಾ ಕೋರ್ಟ್ ಹೊರಗೆ ಸ್ಫೋಟ : ಓರ್ವ ಸಾವು, 13 ಮಂದಿಗೆ ಗಾಯ

Update: 2022-03-09 18:39 GMT
Image: ANI 

ಹೊಸದಿಲ್ಲಿ, ಮಾ. 9: ಜಮ್ಮು ವಲಯದ ಉಧಮ್ಪುರ ಪಟ್ಟಣದಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಹೊರಗೆ ಬುಧವಾರ ಸಂಭವಿಸಿದ ಸ್ಫೋಟದಿಂದ ಓರ್ವ ಮೃತಪಟ್ಟಿದ್ದಾನೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ.

ಈ ಸ್ಫೋಟ ಅಪರಾಹ್ನ 1 ಗಂಟೆಗೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಾಪಾರಿಗಳು ತರಕಾರಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತಿರುವ ಹಾಗೂ ತಮ್ಮ ಕೈಗಾಡಿಯನ್ನು ಇರಿಸಿರುವ ಸ್ಲೇಥಿಯಾ ಚೌಕ್ನಲ್ಲಿ ಈ ಸ್ಫೋಟ ಸಂಭವಿಸಿದೆ. ಮಾರಾಟದ ಗಾಡಿಯ ಅಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹಾಗೂ ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ‘‘ನಾನು ಉಪ ಆಯುಕ್ತರೊಂದಿಗೆ ಸಂಪರ್ಕದಲ್ಲಿದ್ದೇನೆ. ಸ್ಫೋಟದ ಮೂಲ ಹಾಗೂ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೂಡಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’’ ಎಂದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News