ಪಂಜಾಬ್‌ನಲ್ಲಿ ಆಪ್ ಗೆ ಭಾರೀ ಮುನ್ನಡೆ

Update: 2022-03-10 05:00 GMT

ಹೊಸದಿಲ್ಲಿ: ಪಂಜಾಬ್‌ನ ಮತಗಳ ಎಣಿಕೆಯ ಆರಂಭಿಕ ಟ್ರೆಂಡ್‌ಗಳು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ) ಎಲ್ಲಾ ಎಕ್ಸಿಟ್ ಪೋಲ್‌ಗಳು ಊಹಿಸಿದಂತೆ ಭಾರೀ ಮುನ್ನಡೆ ಸಾಧಿಸಿದೆ. ಬಹುಕೋನ ಹೋರಾಟದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಅಕಾಲಿ ದಳ ಕಳಪೆ ಸಾಧನೆ ಮಾಡಿದೆ.

ಬೆಳಗ್ಗೆ 10:10 ರ ಹೊತ್ತಿಗೆ, ಒಟ್ಟು 117 ಸ್ಥಾನಗಳಲ್ಲಿ ಆಪ್ 85 ಹಾಗೂ  ಕಾಂಗ್ರೆಸ್ 17 ರಲ್ಲಿ ಮುನ್ನಡೆ ಸಾಧಿಸಿದೆ. ಅಕಾಲಿದಳ 10 ಬಿಜೆಪಿ ಮತ್ತು ಮಿತ್ರಪಕ್ಷಗಳು 4 ರಲ್ಲಿವೆ.

 "ಪಂಜಾಬ್ ಕೇಜ್ರಿವಾಲ್ ಮಾದರಿಯ ಆಡಳಿತವನ್ನು ಸ್ವೀಕರಿಸಿದೆ" ಎಂದು ಎಎಪಿಯ ರಾಘವ್ ಚಡ್ಡಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಶಿರೋಮಣಿ ಅಕಾಲಿದಳದ ಬಿಕ್ರಮ್ ಸಿಂಗ್ ಮಜಿಥಿಯಾ ಹಾಗೂ  ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು  ಪ್ರಸ್ತುತ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News