ಪಂಜಾಬ್ ಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಸೋಲನ್ನಪ್ಪಿದ ಮಾಜಿ ಸಿಎಂ ಚರಣಜಿತ್ ಸಿಂಗ್ ಚನ್ನಿ

Update: 2022-03-10 17:03 GMT

ಚಂಡಿಗಡ,ಮಾ.10: ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರು ತಾನು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದಾರೆ.

ಚಮಕೌರ್ ಸಾಹಿಬ್ ನಲ್ಲಿ ಆಪ್ ಅಭ್ಯರ್ಥಿ ಅವರು ಮುಖ್ಯಮಂತ್ರಿ ವಿರುದ್ಧ 6,373 ಮತಗಳ ಅಂತರದಿಂದ ಗೆದ್ದಿದ್ದರೆ, ಭದೌರಾ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಲಾಭಸಿಂಗ್ ಉಗೋಕೆ ಅವರು ಚನ್ನಿ ವಿರುದ್ಧ 36,964 ಮತಗಳ ಅಂತರದಿಂದ ಗೆಲುವನ್ನು ದಾಖಲಿಸಿದ್ದಾರೆ.

ಅತ್ತ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಇಬ್ಬರು ಪ್ರಭಾವಿ ಅಭ್ಯರ್ಥಿಗಳಾದ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಅಕಾಲಿ ದಳ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರನ್ನು ಸೋಲಿಸಿದ್ದಾರೆ. ಅಲ್ಲಿ ಆಪ್ ನ 'ಪ್ಯಾಡ್ ವುಮನ್' ಜೀವನ ಜ್ಯೋತ್ ಕೌರ್ ಅವರು 39,679 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಸಿಧುಗೆ 32,929 ಮತ್ತು ಮಜಿಥಿಯಾಗೆ 25,188 ಮತಗಳು ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News