"ನಮಗೆ ಹಿಂದೂ-ಮುಸ್ಲಿಂ ಎಂದೇನಿಲ್ಲ, ನಾವು ಎಲ್ಲರಿಗಾಗಿ ಕೆಲಸ ಮಾಡಿದ್ದೇವೆ: ಉತ್ತರಪ್ರದೇಶ ಬಿಜೆಪಿ ಸಚಿವ

Update: 2022-03-10 08:49 GMT
Photo: Twitter/goswamisujay

ಲಕ್ನೋ: ಉತ್ತರ ಪ್ರದೇಶ ಸಚಿವ ಸತೀಶ್ ಮಹಾನಾ ಅವರು ಗುರುವಾರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವು ಪಕ್ಷದ ವೋಟ್‌ ಬ್ಯಾಂಕ್ ಹಿಂದೂ ಬಹುಸಂಖ್ಯಾತ ಮತಗಳ ಆಧಾರವನ್ನು ಮೀರಿದೆ ಎಂಬುದನ್ನು ತೋರಿಸಿದೆ. ಬಿಜೆಪಿಯ ಯೋಜನೆಗಳು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳಿಗೆ ಸೇರಿದೆ ಎಂದು ಹೇಳಿದ್ದಾರೆ.
 
"ನಮ್ಮ ಪಕ್ಷಕ್ಕೆ ಈ ಫಲಿತಾಂಶವು (ಪ್ರಧಾನಿ ನರೇಂದ್ರ) ಮೋದಿಜಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಾಯಕತ್ವದಿಂದ ಬಂದಿದೆ. ಅಂಕಿಅಂಶಗಳು ಸೂಚಿಸುವಂತೆ ನಾವು ನಮ್ಮ ಮತಗಳ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಆದಿತ್ಯನಾಥ್ ನಾಯಕತ್ವದ ಮೇಲಿನ ಜನರ ನಂಬಿಕೆಯಿಂದಾಗಿ‌ ಈ ಫಲಿತಾಂಶ ಬಂದಿದೆ. ಅವರು‌ ಭರವಸೆಗಳನ್ನು ಈಡೇರಿಸಿದ್ದಾರೆ ಮತ್ತು ಯುಪಿಯನ್ನು ಮಾಫಿಯಾ ಮುಕ್ತಗೊಳಿಸಿದ್ದಾರೆ" ಎಂದು ಸತೀಶ್ ಮಹಾನಾ ಹೇಳಿದ್ದಾರೆ.

"ನಾವು ಈಗ ಅಭಿವೃದ್ಧಿಯೊಂದಿಗೆ ಮುಂದುವರಿಯುತ್ತೇವೆ. ಯುಪಿಯನ್ನು ಭಾರತದಲ್ಲಿ ವಿಶೇಷವಾಗಿ ಉತ್ಪಾದನೆಯಲ್ಲಿ ಪ್ರಮುಖ ರಾಜ್ಯವನ್ನಾಗಿ ಮಾಡುತ್ತೇವೆ. ನಾವು ಉತ್ತರಪ್ರದೇಶಕ್ಕೆ ಐಟಿಯಿಂದ ಎಲೆಕ್ಟ್ರಾನಿಕ್ಸ್‌ ವರೆಗೆ ದೊಡ್ಡ ಯೋಜನೆಗಳನ್ನು ಹೊಂದಿದ್ದೇವೆ. ನಾವು ಮಾಡಲು ಸಾಕಷ್ಟು ಕೆಲಸಗಳನ್ನು ಹೊಂದಿದ್ದೇವೆ. ನಮ್ಮ ಉತ್ತಮ ಕೆಲಸ ಮತ್ತು ಕಠಿಣ ಪರಿಶ್ರಮವನ್ನು ಮುಂದುವರಿಸಲು ಬೆಂಬಲ ನೀಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ. 

"ಹಿಂದೂಗಳು, ಮುಸ್ಲಿಮರು ಸೇರಿದಂತೆ ನಾವು ಪ್ರತಿಯೊಬ್ಬರ ಪರವಾಗಿ ನಿಲ್ಲುತ್ತೇವೆ. ನಾವು ಹಿಂದೂ-ಮುಸ್ಲಿಂ ಎಂದು ಪ್ರತ್ಯೇಕಿಸುವುದಿಲ್ಲ ನಮ್ಮ ಯೋಜನೆಗಳು ಎಲ್ಲರಿಗೂ ಸೇರಿದೆ. ನಾವು ಎಲ್ಲರಿಗಾಗಿ ಕೆಲಸ ಮಾಡುತ್ತೇವೆ ಮತ್ತು ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. ಮೋದಿ ಜಿ ಮತ್ತು ಯೋಗಿ ಜಿ ನಾಯಕತ್ವದಲ್ಲಿ, ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತೇವೆ ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ," ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News