×
Ad

ರಶ್ಯದಲ್ಲಿ ಯುದ್ಧವಿರೋಧಿ ಪ್ರತಿಭಟನೆ: 13,000 ಮಂದಿಯ ಬಂಧನ

Update: 2022-03-10 22:43 IST
photo courtesy:twitter

ಮಾಸ್ಕೊ, ಮಾ.10: ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಯುದ್ಧವನ್ನು ಪ್ರತಿಭಟಿಸಿ ರಶ್ಯದಾದ್ಯಂತ 69 ನಗರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ಚದುರಿಸಿರುವ ಪೊಲೀಸರು ರವಿವಾರ ಒಂದೇ ದಿನ 5000ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಆಕ್ರಮಣ ಆರಂಭವಾದ ಫೆಬ್ರವರಿ 24ರಂದು 1,900 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಲಾಠಿಚಾರ್ಜ್ ನಡೆಸಿ ಬಂದೂಕಿನ ತುದಿಯಿಂದ ಥಳಿಸಿ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ. ಬಂಧಿತರಲ್ಲಿ ಮಹಿಳೆಯರೂ ಸೇರಿದ್ದು ಮಾಸ್ಕೋದ ಬ್ರಟವೆಯೊ ಪೊಲೀಸ್ ಠಾಣೆಯಲ್ಲಿ ತಮಗೆ ಥಳಿಸಿ, ಒದೆಯಲಾಗಿದೆ. 

ನೀರಿನಲ್ಲಿ ಮುಳುಗಿಸಿ ಚಿತ್ರಹಿಂಸೆ ನೀಡುವ ಜತೆಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಗಿದೆ ಎಂದು ಮಹಿಳೆಯರು ದೂರಿದ್ದು ತಮ್ಮ ವಿರುದ್ಧದ ದೌರ್ಜನ್ಯವನ್ನು ಗುಪ್ತವಾಗಿ ಮೊಬೈಲ್ ನಲ್ಲಿ ದಾಖಲಿಸಿಕೊಂಡು ರಶ್ಯಾದ ಸ್ವತಂತ್ರ ದಿನಪತ್ರಿಕೆ ನೊವಾಯ ಗಝೆಟಾ ಪತ್ರಿಕೆಗೆ ತಲುಪಿಸಿದ್ದಾರೆ. ಪತ್ರಿಕೆಯವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ . ಹಲವು ಪತ್ರಕರ್ತರನ್ನೂ, ಮಕ್ಕಳನ್ನೂ ಬಂಧಿಸಲಾಗಿದ್ದು ಇದುವರೆಗೆ 13,000 ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಪುಟಿನ್ ಕಡು ವಿರೋಧಿಯಾಗಿರುವ, ಜೈಲಿನಲ್ಲಿರುವ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯ ಬ್ಗಾಗ್‌ನಲ್ಲಿ  ‘ಉಕ್ರೇನ್ ಮೇಲೆ , ಉಕ್ರೇನ್‌ನ ಶಾಂತಿಪ್ರಿಯ ಜನರ ಮೇಲೆ ಆಕ್ರಮಣ ನಡೆಸಿದ್ದು ರಶ್ಯ ಅಲ್ಲ, ಪುಟಿನ್. ಶಾಂತಿಯನ್ನು ಪ್ರೀತಿಸುವ ರಶ್ಯಾದ ಮಿಲಿಯಾಂತರ ಜನತೆ ಈ ಆಕ್ರಮಣದ ವಿರುದ್ಧವಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News