ಶಿರೂರು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ-ಪೋಷಕರಿಗೆ ಪ್ರೇರಣಾ ಶಿಬಿರ

Update: 2022-03-11 06:10 GMT

ಶಿರೂರು: ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ, ನಾಖುದಾ ವೆಲ್ಫೇರ್ ಅಸೊಸಿಯೇಷನ್ ಶಿರೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರು ಇವರ ವತಿಯಿಂದ ಸರಕಾರಿ ಪ್ರೌಢಶಾಲೆ ಶಿರೂರಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿ-ಪೋಷಕರಿಗೆ ಪ್ರೇರಣಾ ಕಾರ್ಯಾಗಾರ ನಡೆಯಿತು.

ಶಿಬಿರದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ತುಳಸಿದಾಸ್ ಮೊಗೇರ ಇವರು ನಿರ್ವಹಿಸಿದರು.

ರಫೀಕ್ ಮಾಸ್ಟರ್ ಮಂಗಳೂರು ಮತ್ತು ಅಬ್ದುಲ್ ರವೂಫ್ ಕೆ.ಇ.ಎಸ್ (ಕ್ಷೇತ್ರ ಸಮನ್ವಯಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೈಂದೂರು ವಲಯ) ಇವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರತ್ಯೇಕವಾಗಿ ಕಾರ್ಯಾಗಾರ ನಡೆಸಿದರು.

ರಫೀಕ್ ಮಾಸ್ಟರ್ ತರಬೇತಿ ನೀಡಿದರು. ಈ ಶಾಲೆಯಲ್ಲಿ ತೀರಾ ಬಡ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿದ್ದು ಮೆರಿಟ್ ವಿಭಾಗದಲ್ಲಿ ಉತ್ತೀರ್ಣರಾದಲ್ಲಿ ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ನಾಖುದಾ ವೆಲ್ಫೇರ್ ಅಸೊಸಿಯೇಷನ್ ಸಂಘಟನೆಗಳು ಇವರಿಗೆ ಪೂರ್ಣ ಪ್ರಮಾಣದಲ್ಲಿ ಸಹಾಯವನ್ನು ನೀಡುವರು ಎಂದು ಈ ಕಾರ್ಯಕ್ರಮದ ಮೂಲಕ ತಿಳಿಸಲಾಯಿತು. 

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದಲೇ ಗೂಗಲ್ ಫಾರ್ಮ್ ಮೂಲಕ ಪ್ರತಿಕ್ರಿಯೆಯನ್ನು ಸ್ವೀಕರಿಸಿಲಾಯಿತು.

ಪ್ರತಿಕ್ರಿಯೆಗಳ ಆಧಾರದ ಮೇಲೆ ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ನಾಖುದಾ ವೆಲ್ಫೇರ್ ಅಸೊಸಿಯೇಷನ್ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಲು ನಿರ್ಧರಿಸಲಾಯಿತು.

ಕಾರ್ಯಕ್ರಮದಲ್ಲಿ ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ, ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಅಜ್ಮಲ್, ಜಿಲ್ಲಾ ಸದಸ್ಯ ಪರಿ ಹುಸೈನ್, ಕಚಿ ಮುಷ್ತಾಕ್, ಶೇಖ್ ಹಬೀಬುಲ್ಲಾ, ನಾಖುದಾ ವೆಲ್ಫೇರ್ ಅಸೊಸಿಯೇಷನ್ ನ ಅಧ್ಯಕ್ಷ ಮಮ್ದು ಇಬ್ರಾಹೀಮ್, ಸ್ಥಾಪಕ ಸದಸ್ಯ ಕಾವಾ ರಿಯಾಝ್, ಮನೇಗಾರ್ ಮನ್ಸೂರ್, ಬುಡ್ಜಿ ರಹ್ಮತುಲ್ಲಾ, ಅಫ್ಶಾನ್ ಪರಿ, ಕಾಸ್ಮಾ ಮತೀನ್,  ಉಪ ಪ್ರಾಂಶುಪಾಲರಾದ ಬೊಮ್ಮಯ್ಯ ಬಿ ಗಾಂವ್ಕರ್, ಎಸ್.ಡಿ.ಎಮ್.ಸಿ.ಯ ಸದಸ್ಯರು, ಶಾಲಾ ಶಿಕ್ಷಕ ವೃಂದ ಮತ್ತು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.

ಶಾಲಾ ಅಧ್ಯಾಪಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News