ಮಂಗಳೂರಿನ ಮೋತಿಮಹಲ್‌ನಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಮಾರಾಟ

Update: 2022-03-11 16:36 GMT

ಮಂಗಳೂರು, ಮಾ.11: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೊಟೇಲ್ ಮೋತಿಮಹಲ್‌ನಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಪ್ರತಿಷ್ಠಿತ ಬ್ರಾಂಡ್‌ಗಳ ಸಿದ್ಧ ಉಡುಪುಗಳ ಮಾರಾಟ ಮೇಳ ಭರದಿಂದ ಸಾಗಿದೆ.

ಈ ಮೇಳದಲ್ಲಿ 50,000ಕ್ಕೂ ಅಧಿಕ ವಿವಿಧ ಪ್ರಕಾರದ ಜಂಟ್ಸ್, ಲೇಡಿಸ್, ಕಿಡ್ಸ್ ಪ್ಯಾಂಟ್, ಟೀ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕಾಪ್ರಿ, ಪಲಾಜೊ ಕೇವಲ 200 ರೂ.ಗಳಿಂದ 350 ರೂ.ವರೆಗಿನ ದರದಲ್ಲಿ ಲಭ್ಯವಿದೆ. ಮಹಿಳೆಯರಿಗಾಗಿ ಬ್ರಾಂಡೆಡ್ ಕುರ್ತೀಸ್ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಬ್ರಾಂಡ್‌ಗಳ ಕುರ್ತೀಸ್ 350 ರೂ.ಗಳಿಂದ 500 ರೂ.ವರೆಗಿನ ಬೆಲೆಯಲ್ಲಿ ಸಿಗುತ್ತದೆ. ಪುರುಷರ ಪ್ರಮುಖ ಬ್ರಾಂಡ್‌ಗಳಾದ ಮಾರ್ಕ್ ಟೈಲರ್, ಆ್ಯರೋ, ಪೀಸ್ ಜೀನ್ಸ್, ಬ್ಲಾಕ್‌ ಬೆರೀಸ್, ಲೀ, ನೆಟ್‌ಪ್ಲೇ ಇವುಗಳ ಶರ್ಟ್ಸ್, ಟೀ-ಶರ್ಟ್ಸ್, ಪ್ಯಾಂಟ್, ಫುಲ್‌ ಓವರ್ ಕೇವಲ 499 ರೂ.ಗಳಿಂದ 999 ರೂ.ಗಳಿಗೆ ದೊರೆಯುತ್ತವೆ.

ಮಕ್ಕಳಿಗಾಗಿ 10,000 ರೂ.ಗಳಿಗಿಂತಲೂ ಅಧಿಕ ಕಿಡ್ಸ್ ಗಾರ್ಮೆಂಟ್ಸ್ ಇಲ್ಲಿ ಪ್ರದರ್ಶನಗೊಗೊಳ್ಳುತ್ತಿದ್ದು 1 ತಿಂಗಳಿನಿಂದ 12 ವರ್ಷದ ವಯೋಮಿತಿಯವರಿಗಾಗಿ ಹೆಣ್ಣು ಮತ್ತು ಗಂಡು ಮಕ್ಕಳ ಟಾಪ್ಸ್, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫ್ಯಾನ್ಸಿ ಟ್ರಾಕ್, ಫ್ಯಾನ್ಸಿ ಡ್ರೆಸ್, ಪುಲ್ಲೋವರ್, ಜಾಕೆಟ್ ಇತ್ಯಾದಿ ಕೇವಲ 150 ರೂ.ನಿಂದ 599 ರೂ.ಗೆ ಲಭ್ಯವಿದೆ. ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್‌ಶೀಟ್, ಪಿಲ್ಲೋ ಕವರ್, ಸೋಫಾ ಕವರ್ ಇತ್ಯಾದಿಗಳ ವಿಫುಲ ಸಂಗ್ರಹವಿದೆ.

ಗ್ರಾಹಕರ ಅನುಕೂಲತೆಗಾಗಿ ಖರೀದಿಗೆ ಪ್ರಮುಖ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಗೂಗಲ್ ಪೇ, ಫೋನ್ ಪೇ ಸ್ವೀಕರಿಸಲಾಗುತ್ತಿದೆ. ಮಧ್ಯಾಹ್ನ ಭೋಜನ ವಿರಾಮವಿಲ್ಲದೆ ನಿರಂತರವಾಗಿ ಮಾರಾಟ ಮೇಳವಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News