ಭಟ್ಕಳ: ನ್ಯೂಶಮ್ಸ್ ಸ್ಕೂಲ್ ನಲ್ಲಿ ಸಾಂಸ್ಕೃತಿಕ ಕಲೋತ್ಸವ

Update: 2022-03-11 17:21 GMT

ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂಶಮ್ಸ್ ಶಾಲೆಯಲ್ಲಿ ಗುರುವಾರ ವಾರ್ಷಿಕ ಸಾಂಸ್ಕೃತಿಕ ಕಲೋತ್ಸವ ಜರಗಿತು.

ಮುಖ್ಯ ಅತಿಥಿಯಾಗಿ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಮೋಂಟೆಸ್ಸರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳ ಜೀವನದಲ್ಲಿ ಶಾಲಾ ಶಿಕ್ಷಣ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದರು. ಡಿಜಿಟೀಕರಣದ ಈ ಕಾಲದಲ್ಲಿ ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ರೂಪಿಸಬೇಕಿದೆ ಎಂದ ಅವರು ಪಾಲಕರು ಸಹ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.

ಮೋಂಟೇಸ್ಸರಿ ವಿದ್ಯಾರ್ಥಿಗಳು ಡಾ.ಬಾಬಾ ಸಾಹೇಬ್, ಅಂಬೇಡ್ಕರ್‍, ಎಪಿಜೆ ಅಬ್ದುಲ್ ಕಲಾಂ, ಇಂದಿರಾಗಾಂಧೀ ಮತ್ತಿತರ ಮಹಾನ್ ವ್ಯಕ್ತಿಗಳ ರೂಪವನ್ನು ಧರಿಸಿ ವೇದಿಕೆಯಲ್ಲಿ ಐತಿಹಾಸಿಕ ವಾತಾವರಣ ಸೃಷ್ಟಿಸಿದ್ದರು.

ಈ ಸಂದರ್ಭದಲ್ಲಿ ಸ್ನೇಹಾ ವಿಶೇಷ ಶಾಲೆಯ ಮಾಲತಿ ಉದ್ಯಾವರ್‍, ಪುರಸಭೆ ಆರೋಗ್ಯಾಧಿಕಾರಿ ಸೋಜಿಯ ಸೋನಿ, ಕಾರ್ಯದರ್ಶಿ ಅನಂ ಆಲಾ ಎಂ.ಟಿ,  ಮತ್ತಿತರರು ಉಪಸ್ತಿತರಿದ್ದರು. ಪ್ರಾಂಶುಪಾಲ ಲಿಯಾಖತ್ ಅಲಿ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News