ರಾಸಾಯನಿಕ ಅಸ್ತ್ರ ಬಳಸಿದರೆ ತೀವ್ರ ಬೆಲೆ ತೆರಲಿದ್ದೀರಿ: ರಷ್ಯಾಗೆ ಅಮೆರಿಕಾ ಎಚ್ಚರಿಕೆ

Update: 2022-03-11 17:39 GMT

ವಾಷಿಂಗ್ಟನ್: ಉಕ್ರೇನ್‌ನಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಿದರೆ ರಷ್ಯಾ ʼತೀವ್ರ ಬೆಲೆʼ ತೆರಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಅದೇ ವೇಳೆ, ʼಮೂರನೇ ಮಹಾಯುದ್ಧಕ್ಕೆʼ ಪ್ರಚೋದನೆಯನ್ನು ನೀಡದಿರುವಂತೆ ಅವರು ರಷ್ಯಾಗೆ ತಾಕೀತು ಮಾಡಿದ್ದಾರೆ.

ಉಕ್ರೇನ್ ಮತ್ತು ಅಮೇರಿಕಾ ಜೈವಿಕ ಹಾಗೂ ರಾಸಾಯನಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಷ್ಯಾ ಆರೋಪಿಸಿದ ನಂತರ ಬಿಡೆನ್ ಪ್ರತಿಕ್ರಿಯಿಸಿದ್ದಾರೆ.

"ನಾನು ಗುಪ್ತಚರ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಆದರೆ ಅವರು (ರಷ್ಯಾ) ರಾಸಾಯನಿಕಗಳನ್ನು ಬಳಸಿದರೆ ಮಾತ್ರ ತೀವ್ರ ಬೆಲೆ ತೆರಲಿದ್ದಾರೆ" ಎಂದು ಎಚ್ಚರಿಸಿದ್ದಾರೆ.

ನಾವು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. ನ್ಯಾಟೋ ಮತ್ತು ರಷ್ಯಾ ನಡುವಿನ ಮೂರನೇ ವಿಶ್ವಯುದ್ಧವನ್ನು ನಾವು ತಡೆಯಲು ಶ್ರಮಿಸಬೇಕು ಎಂದು ಬಿಡೆನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News