×
Ad

ರಾಜಸ್ಥಾನ ರಾಯಲ್ಸ್ ನ ವೇಗದ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ಸೇರ್ಪಡೆ

Update: 2022-03-12 12:34 IST

 ಮುಂಬೈ, ಮಾ.11: ಮಾರ್ಚ್ 26ರಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ವೇಗದ ಬೌಲಿಂಗ್ ಕೋಚ್ ಆಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ‘ತಂಡದ ಉತ್ತೇಜಕ’ರಾಗಿ ಪ್ಯಾಡಿ ಅಪ್ಟನ್ ಸೇರಿಕೊಂಡಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ಶುಕ್ರವಾರ ಪ್ರಕಟಿಸಿದೆ.

ಶ್ರೀಲಂಕಾದ ಪರ ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ 340 ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 546 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2014ರ ಐಸಿಸಿ ವಿಶ್ವಕಪ್ ಟ್ರೋಫಿಯಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು. ಇದೀಗ ರಾಯಲ್ಸ್‌ನ ಪ್ರತಿಭಾವಂತ ವೇಗದ ಬೌಲರ್‌ಗಳ ಗುಂಪಿನೊಂದಿಗೆ ಕೆಲಸ ಮಾಡಲಿದ್ದಾರೆ.

‘‘ಐಪಿಎಲ್‌ಗೆ ವಾಪಸಾಗುತ್ತಿರುವುದು ನನಗೆ ಅದ್ಭುತ ಅನುಭವ ನೀಡುತ್ತಿದೆ. ರಾಜಸ್ಥಾನ ರಾಯಲ್ಸ್‌ಗೆ ಸೇರ್ಪಡೆಯಾಗುತ್ತಿರುವುದು ಗೌರವದ ವಿಚಾರವಾಗಿದೆ. ರಾಯಲ್ಸ್‌ನಎಲ್ಲ ವೇಗದ ಬೌಲರ್‌ಗಳಿಗೆ ಬೆಂಬಲ ನೀಡಲು, ಫ್ರಾಂಚೈಸಿಯ ಗೇಮ್ ಪ್ಲಾನ್ ಹಾಗೂ ಸಮಗ್ರ ಅಭಿವೃದ್ದಿಗೆ ಪ್ರೋತ್ಸಾಹಿಸಲು ಎದುರು ನೋಡುತ್ತಿರುವೆ’’ ಎಂದು 38ರ ಹರೆಯದ ಮಾಲಿಂಗ ಹೇಳಿದ್ದಾರೆ. ಮಾಲಿಂಗ ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದ್ದರು. 122 ಪಂದ್ಯಗಳಲ್ಲಿ ಒಟ್ಟು 170 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2013ರಿಂದ 15 ಹಾಗೂ 2019ರಲ್ಲಿ ರಾಜಸ್ಥಾನದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ದಕ್ಷಿಣ ಆಫ್ರಿಕಾದ ಪ್ಯಾಡಿ ಅಪ್ಟನ್ 2013 ಹಾಗೂ 2015ರಲ್ಲಿ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಲು ನೆರವಾಗಿದ್ದರು. ಇದೀಗ ಹೊಸ ಪಾತ್ರದಲ್ಲಿ ರಾಯಲ್ಸ್‌ಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News