ಕಾರ್ಕಳ: ಮಾ.13ರಿಂದ ರಸ್ತೆ ಬದಿ ವ್ಯಾಪಾರ, ತಳ್ಳುಗಾಡಿ ನಿಷೇಧ
Update: 2022-03-12 21:57 IST
ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಜರುಗುವ ಕಾರ್ಕಳ ಉತ್ಸವ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣದ ಸಲುವಾಗಿ ಅನಂತಶಯನದಿಂದ ಮೂರು ಮಾರ್ಗದ ವರೆಗೆ ಮಾ. 13 ರಿಂದ 20ರವರೆಗೆ ಎಲ್ಲಾ ಬೀದಿ ಬದಿ ವ್ಯಾಪಾರ ಹಾಗೂ ತಳ್ಳು ಗಾಡಿ ವ್ಯಾಪಾರ ವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ