ಶರದ್ ಪವಾರ್ ವಿರುದ್ದ ಹೇಳಿಕೆ ಆರೋಪ: ಬಿಜೆಪಿ ಶಾಸಕ, ಸಹೋದರನ ವಿರುದ್ಧ ಕೇಸ್
Update: 2022-03-13 13:49 IST
ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಹಾಗೂ ಅವರ ಸಹೋದರ ನಿಲೇಶ್ ರಾಣೆ ವಿರುದ್ಧ ಮುಂಬೈ ಪೊಲೀಸರು ರವಿವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‌ಸಿಪಿ ಪದಾಧಿಕಾರಿ ಶ್ರೀನಿವಾಸ್ ಅವರ ದೂರಿನ ಆಧಾರದ ಮೇಲೆ ಆಝಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ 120-ಬಿ (ಕ್ರಿಮಿನಲ್ ಪಿತೂರಿ), 499 (ಮಾನನಷ್ಟ), 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ ರಾಣೆ ಸಹೋದರರು ಹೇಳಿಕೆಗಳನ್ನು ನೀಡುತ್ತಿರುವಂತೆ ಕಂಡುಬಂದ ಕೆಲವು ವೀಡಿಯೊ ತುಣುಕುಗಳನ್ನು ಚವಾಣ್ ಪೊಲೀಸರಿಗೆ ಸಲ್ಲಿಸಿದ್ದಾರೆ.