×
Ad

ಬೆಂಬಲಿಗರೊಂದಿಗೆ ಸೇರಿ ಮದ್ಯದಂಗಡಿಗೆ ಕಲ್ಲೆಸೆದ ಉಮಾ ಭಾರತಿ: ವಾರದೊಳಗೆ ಬಾರ್‌ಗಳನ್ನು ಮುಚ್ಚುವಂತೆ ತಾಕೀತು

Update: 2022-03-13 20:12 IST
Photo: Twitter/umasribharti

ಭೋಪಾಲ್:‌ ಮಧ್ಯಪ್ರದೇಶದ ಮಾಜಿ ಸಿಎಂ ಉಮಾಭಾರತಿ ಇದ್ದಕ್ಕಿದ್ದಂತೆ ಮದ್ಯದಂಗಡಿಗೆ ನುಗ್ಗಿ ಕಲ್ಲೆಸೆದು ಧ್ವಂಸ ಮಾಡಿದ್ದಾರೆ. ಬೆಂಬಲಿಗರೊಂದಿಗೆ ಮದ್ಯದಂಗಡಿಗೆ ನುಗ್ಗಿದ ಉಮಾಭಾರತಿ ಕಲ್ಲು ಎಸೆದು ಮದ್ಯದ ಬಾಟಲಿಗಳನ್ನು ಒಡೆದಿದ್ದಾರೆ. ಈ ವೇಳೆ, ಉಮಾಭಾರತಿ ಬೆಂಬಲಿಗರು ಕೂಡ ʼಜೈ ಶ್ರೀ ರಾಂʼ ಘೋಷಣೆಗಳನ್ನು ಕೂಗಿದ್ದಾರೆ.

ಭೋಪಾಲ್‌ನ BHEL ಪ್ರದೇಶದ ಆಜಾದ್ ನಗರದಲ್ಲಿ ಘಟನೆ ನಡೆದಿದ್ದು, ಮದ್ಯದಂಗಡಿಗೆ ಕಲ್ಲೆಸೆಯುವ ವಿಡಿಯೋವನ್ನು ಸ್ವತಃ ಉಮಾಭಾರತಿಯೇ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರದೇಶದಲ್ಲಿರುವ ಕಾರ್ಮಿಕರ ದುಡಿಮೆಯೆಲ್ಲಾ ಇಲ್ಲಿಗೆ ಸುರಿಯುತ್ತಿದ್ದಾರೆ, ಹತ್ತಿರದಲ್ಲಿ ದೇವಾಲಯಗಳಿವೆ, ಸಣ್ಣ ಮಕ್ಕಳ ಶಾಲೆಗಳಿವೆ ಎಂದು ಉಮಾಭಾರತಿ ಟ್ವೀಟ್ ಮಾಡಿ ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ.

ಪ್ರತಿ ಬಾರಿಯೂ ಮದ್ಯದಂಗಡಿಯನ್ನು ಮುಚ್ಚುವ ಭರವಸೆಯನ್ನು ಆಡಳಿತ ನೀಡುತ್ತಿತ್ತು ಆದರೆ ಹಲವು ವರ್ಷಗಳಿಂದ ಮಾಡಿಲ್ಲ ಎಂದು ಉಮಾಭಾರತಿ ಆರೋಪಿಸಿದ್ದಾರೆ. ಇಂದು ಒಂದು ವಾರದೊಳಗೆ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆಡಳಿತಕ್ಕೆ ತಾಕೀತು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News