ನ್ಯಾಟೋ ಸದಸ್ಯ ದೇಶಗಳ ಮೇಲೆಯೇ ರಷ್ಯಾ ದಾಳಿ ಮಾಡುವ ಅಪಾಯವಿದೆ : ಉಕ್ರೇನ್ ಅಧ್ಯಕ್ಷ ಎಚ್ಚರಿಕೆ

Update: 2022-03-14 02:23 GMT
ಝೆಲೆನ್ಸ್ಕಿ

ಕೀವ್: ಉಕ್ರೇನ್ ವಾಯು ಪ್ರದೇಶವನ್ನು ತಕ್ಷಣವೇ ಹಾರಾಟ ನಿಷೇಧ ವಲಯವಾಗಿ ನ್ಯಾಟೋ ದೇಶಗಳು ಘೋಷಿಸದಿದ್ದರೆ, ನ್ಯಾಟೋ ಸದಸ್ಯ ದೇಶಗಳ ಮೇಲೆಯೇ ರಷ್ಯಾ ದಾಳಿ ಮಾಡುವ ಅಪಾಯವಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.

"ನೀವು ನಮ್ಮ ಆಕಾಶವನ್ನು ಹಾರಾಟ ಮುಕ್ತ ಎಂದು ಘೋಷಿಸದಿದ್ದರೆ, ರಷ್ಯನ್ ರಾಕೆಟ್‍ಗಳು ನಿಮ್ಮ ಭೂ ಪ್ರದೇಶದಲ್ಲಿ ಬೀಳುವ ಸಮಯ ದೂರವಿಲ್ಲ" ಎಂದು ಸೋಮವಾರ ಬಿಡುಗಡೆ ಮಾಡಿರುವ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಉಕ್ರೇನ್ ಹಾಗೂ ರಷ್ಯಾ ಮುಖಂಡರು ನೇರ ಮಾತುಕತೆ ನಡೆಸುವ ಮೂಲಕ ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ರಷ್ಯಾ ಜತೆ ಸಂಧಾನ ಮಾತುಕತೆ ನಡೆಸುತ್ತಿರುವ ಉಕ್ರೇನ್ ಅಧಿಕಾರಿಗಳು ಖಾತರಿಪಡಿಸಬೇಕು ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ ಉಕ್ರೇನ್ ಮೇಲಿನ ದಾಳಿಗೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡಲು ತಾವು ಬದ್ಧ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೋನ್ ಸ್ಪಷ್ಟಪಡಿಸಿದ್ದಾರೆ.

ನ್ಯಾಟೋ ಸದಸ್ಯ ದೇಶವಾದ ಪೋಲಂಡ್‍ನ ಗಡಿ ಪ್ರದೇಶದಲ್ಲಿ ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿ 35 ಜನರನ್ನು ಹತ್ಯೆ ಮಾಡಿದ ಘಟನೆಯನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅಂಥೋನಿ ಬ್ಲಿಂಕೆನ್ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News