ಕಾರ್ಕಳ : ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ವರುಷ-ಹರುಷ ಕಾರ್ಯಕ್ರಮ
ಕಾರ್ಕಳ : ತನ್ನ ಹಾಗೂ ಇತರರ ಒಳಿತಿಗಾಗಿ ತಪಸ್ಸಾಚರಿಸಿದರೆ ಅದನ್ನು ಆದರ್ಶವಾದುದು ಎಂದು ಇತರರು ಕೊಂಡಾಡುತ್ತಾರೆ. ಆದರೆ ಮಹಾಭಾರತದ ಅಂಬೆಯಂತೆ ದುರಂತಕ್ಕಾಗಿ ಯಾರೂ ತಪಸ್ಸನ್ನು ಮಾಡಬಾರದು ಎಂದು ಆಧ್ಯಾತ್ಮ ಸಾಧಕಿ ಬೆಂಗಳೂರಿನ ಡಾ.ವೀಣಾ ಬನ್ನಂಜೆ ತಿಳಿಸಿದರು.
ಇಲ್ಲಿನ ಅನಂತಶಯನದ ಪ್ರಕಾಶ್ ಹೋಟೇಲ್‌ನ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ವರುಷ-ಹರುಷ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಮಹಿಳಾ ದಿನದ ವಿಶೇಷ ಕಾರ್ಯಕ್ರಮಲ್ಲಿ ‘ ಸ್ತ್ರೀ ತಪಸ್ವಿನಿ ಅಂಬೆ’ ಯ ಕುರಿತು ಮಾತನಾಡಿದ ಅವರು ಅಂಬೆಯ ತಪಸ್ಸು ದುರಂತಮಯವಾದುದು. ಅಂಬೆ ತಪಸ್ಸಸನ್ನಾಚರಿಸಿ ಶಿಖಂಡಿಯಾಗಿ ತನ್ನ ಹೆತ್ತವರಿಗೂ ಖುಷಿ ಕೊಡಲಿಲ್ಲ, ಭೀಷ್ಮನ ಸಾವಿಗೂ ಅಕೆ ಕಾರಣಳಾಗುತ್ತಾಳೆ. ಕೊನೆಗೆ ತಾನು ದುರಂತಕ್ಕೆ ಒಳಗಾಗುತ್ತಾಳೆ. ಇಂತಹ ತಪಸ್ಸು ಒಳ್ಳೆಯದಲ್ಲ. ತಪಸ್ವಿನಿಯರಾದ ದೇವಹೂತಿ, ಅಹಲ್ಯೆ ಹಾಗೂ ಶಬರಿ ಇವರೆಲ್ಲರ ತಪಸ್ಸು ಮಾದರಿಯಾದುದು ಎಂದರು.
ಕಸ್ತೂರಿ ಕಾರಂತ ಅಧ್ಯಕ್ಷತೆ ವಹಿಸಿದ್ದರು. ವೃಂದಾಹರಿಪ್ರಕಾಶ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ರುಕ್ಮಿಣಿದೇವಿ ನಿರೂಪಿಸಿದರು. ಜ್ಯೋತಿ ಶೆಟ್ಟಿ ವಂದಿಸಿದರು.