×
Ad

ಮಾ. 15ರಂದು ಕಾರ್ಕಳ ಉತ್ಸವ ಅಂಗವಾಗಿ ಗಾಳಿಪಟ ಉತ್ಸವ, ಶ್ವಾನ ಪ್ರದರ್ಶನ

Update: 2022-03-14 22:10 IST

ಕಾರ್ಕಳ ಉತ್ಸವ ಅಂಗವಾಗಿ ಮಾರ್ಚ್ 15 ರಂದು ಸ್ವರಾಜ್ ಮೈದಾನದಲ್ಲಿ ಗಾಳಿಪಟ ಉತ್ಸವ ಹಾಗೂ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಶ್ವಾನ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಸುಮಾರು 25ಕ್ಕೂ ಹೆಚ್ಚು ಜಾತಿಯ 150ಕ್ಕೂ ಹೆಚ್ಚಿನ ಸಂಖ್ಯೆಯ ಶ್ವಾನಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಜಾತಿಯ ಶ್ವಾನ ಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಗುವುದು. 1 ಚಾಂಪಿಯನ್ ಶಿಪ್ ಬಹುಮಾನ ಕೂಡ ಇದೆ.
ಜೊತೆಗೆ ಪಪ್ಪು ವಿಭಾಗದಲ್ಲಿ ಒಂದು ಬಹುಮಾನ ಇದೆ. 
ಗಾಳಿಪಟ ಸ್ಪರ್ಧೆ:
ಮಧ್ಯಾಹ್ನ 3 ಗಂಟೆ ಗೆ ಸ್ವರಾಜ್ ಮೈದಾನದಲ್ಲಿ ಗಾಳಿಪಟ ಉತ್ಸವ ನಡೆಯಲಿದ್ದು,  ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಗಾಳಿಪಟ ಹಾರಿಸುವ ಬಗ್ಗೆ ತರಬೇತಿ ನೀಡಲಾಗುವುದು. 
ಈ ಉತ್ಸವದಲ್ಲಿ ಗುಜರಾತ್, ಸೂರತ್, ರಾಜ್ ಕೋಟ್, ಬೆಳಗಾಂ ನಿಂದಲೂ ಗಾಳಿಪಟ ಪ್ರೇಮಿಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News