ಮಾ.17: ಹಿಜಾಬ್ ತೀರ್ಪು ವಿರೋಧಿಸಿ ಅಂಗಡಿ ಮುಗ್ಗಟ್ಟು ಬಂದ್ ಕರೆ; ಹಾಜಿ ಕೆ.ಎಸ್. ಮಸೂದ್ ಬೆಂಬಲ
Update: 2022-03-16 22:27 IST
ಮಂಗಳೂರು : ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ನಿರಾಶದಾಯಕವಾಗಿದ್ದು, ತೀರ್ಪನ್ನು ವಿರೋಧಿಸಿ ಮಾರ್ಚ್17ರಂದು ʼಅಮೀರ್ ಎ ಶರೀಯತ್ʼನ ಮೌಲಾನಾ ಸಗೀರ್ ಅಹ್ಮದ್ ಅವರು ಕರೆ ನೀಡಿರುವ ಬಂದ್ ಗೆ ದಿ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ಅವರು ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.
ಮಾ.17ರಂದು ಎಲ್ಲರೂ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ತಮ್ಮ ವಿರೋಧವನ್ನು ವ್ಯಕ್ತ ಪಡಿಸಬೇಕು. ನ್ಯಾಯಕ್ಕಾಗಿ ಒತ್ತಾಯಿಸಿ ಈ ಬಂದ್ ಕರೆ ನೀಡಲಾಗಿದ್ದು, ಬಂದ್ ಶಾಂತಿಯುತವಾಗಿರಬೇಕು. ಬಲವಂತದ ಬಂದ್ ನಡೆಸಬಾರದು. ಜಾಥಾ, ಮೆರವಣಿಗೆ ಕೂಡ ನಡೆಸಬಾರದು ಎಂದು ಮಸೂದ್ ಅವರು ಮನವಿ ಮಾಡಿದ್ದಾರೆ.