ಮೆಕ್ಸಿಕೊ: ಮತ್ತೊಬ್ಬ ಪತ್ರಕರ್ತನ ಹತ್ಯೆ‌

Update: 2022-03-16 18:07 GMT

ಮೆಕ್ಸಿಕೊ ಸಿಟಿ, ಮಾ.16: ಮೆಕ್ಸಿಕೋದ ಪಶ್ಚಿಮ ಪ್ರಾಂತದಲ್ಲಿ ಬುಧವಾರ ಮತ್ತೊಬ್ಬ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಇದರೊಂದಿಗೆ ದೇಶದಲ್ಲಿ ಈ ವರ್ಷ ಹತ್ಯೆಯಾ ಪತ್ರಕರ್ತರ ಸಂಖ್ಯೆ 8ಕ್ಕೇರಿದೆ.

ಮೊನಿಟರ್ ಮಿಕೊಕನ್’ನ ಆಡಳಿತ ನಿರ್ದೇಶಕ ಅರ್ಮಾಂಡೊ ಲಿನಾರೆಸ್ರನ್ನು ಝಿಟಕ್ವಾರೊ ನಗರದಲ್ಲಿನ ಮನೆಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮೆಕ್ಸಿಕೋದ ಅಟಾರ್ನಿ ಜನರಲ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಮೆಕ್ಸಿಕೋದ ಅಕ್ರಮ ಮಾದಕವಸ್ತು ಮಾರುಕಟ್ಟೆಯ ನಿಯಂತ್ರಣಕ್ಕೆ ಬಲಿಷ್ಟ ಗ್ಯಾಂಗ್ಗಳ ನಡುವೆ ನಡೆಯುತ್ತಿರುವ ಭೂಗತ ಚಟುವಟಿಕೆಯ ಬಗ್ಗೆ ತಮ್ಮ ಮಾಧ್ಯಮದ ಮೂಲಕ ನಿರಂತರ ವರದಿ ಪ್ರಕಟಿಸುತ್ತಿದ್ದ ಲಿನಾರೆಸ್, ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಇತ್ತೀಚೆಗೆ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದರು.

ಜನವರಿ 31ರಂದು ಮೊನಿಟರ್ ಮಿಕೊಕನ್’ನ ಮತ್ತೊಬ್ಬ ಪತ್ರಕರ್ತ ರಾಬರ್ಟೊ ಟೊಲೆಡೊರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News