ಕಮಲಾ ಹ್ಯಾರಿಸ್ ರನ್ನು ಪ್ರಥಮ ಮಹಿಳೆ ಎಂದು ಸಂಭೋಧನೆ: ಬೈಡನ್ ಪ್ರಮಾದ

Update: 2022-03-17 18:23 GMT
PHOTO PTI

ವಾಷಿಂಗ್ಟನ್, ಮಾ.17: ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾದವಶಾತ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ದೇಶದ ಪ್ರಥಮ ಮಹಿಳೆ ಎಂದು ಸಂಬೋಧಿಸಿದಾಗ ಸಭೆಯಲ್ಲಿದ್ದವರು ಘೊಳ್ಳೆಂದು ನಕ್ಕ ಘಟನೆ ನಡೆದಿದೆ. ತಕ್ಷಣ ಬೈಡನ್ ತಮ್ಮ ತಪ್ಪನ್ನು ತಿದ್ದಿಕೊಂಡರು ಎಂದು ವರದಿಯಾಗಿದೆ.


ಸಭೆಯಲ್ಲಿ ಉಪಾಧ್ಯಕ್ಷೆ ಹ್ಯಾರಿಸ್ ಯಾಕೆ ಗೈರಾಗಿದ್ದಾರೆ ಎಂದು ವಿವರಿಸುವ ಸಂದರ್ಭ ಬೈಡನ್ ಈ ಪ್ರಮಾದ ಎಸಗಿದ್ದರು. ಸಭೆಯ ವೇದಿಕೆಯಲ್ಲಿನ ವ್ಯವಸ್ಥೆಯಲ್ಲಿ ತುಸು ಬದಲಾವಣೆಯಾಗಿದೆ. ಯಾಕೆಂದರೆ ಪ್ರಥಮ ಮಹಿಳೆ ಹ್ಯಾರಿಸ್ ಅವರ ಪತಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಬೈಡನ್ ಹೇಳಿದರು. ಆಗ ಆ ಸಭಾಂಗಣದಲ್ಲಿ ನಗೆಯ ಬುಗ್ಗೆ ಚಿಮ್ಮಿದಾಗ ಎಚ್ಚೆತ್ತುಕೊಂಡ ಬೈಡನ್, ಅದು ಹಾಗಲ್ಲ, ಪ್ರಥಮ ಮಹಿಳೆ(ಅಧ್ಯಕ್ಷರ ಪತ್ನಿ) ಸ್ವಸ್ಥರಾಗಿದ್ದಾರೆ. ದ್ವಿತೀಯ ಮಹಿಳೆ.. ಪ್ರಥಮ ಮಹಾಶಯ ಎನ್ನಬಹುದೇ? ಎಂದು ಕಿರುನಗೆಯೊಂದಿಗೆ ಪ್ರಶ್ನಿಸಿದರು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News