×
Ad

ರಷ್ಯಾ ಪರ ಹೋರಾಟಕ್ಕೆ ಮುಂದಾದ 1000 ಮಂದಿ ಚೆಚನ್ ಪ್ರಜೆಗಳು

Update: 2022-03-18 07:14 IST
ಫೈಲ್‌ ಫೋಟೊ

ಮಾಸ್ಕೊ: ಉಕ್ರೇನ್‍ನಲ್ಲಿ ರಷ್ಯಾ ಪರ ಹೋರಾಟಕ್ಕೆ ಒಂದು ಸಾವಿರ ಮಂದಿ ಚೆಚನ್ ಪ್ರಜೆಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಚೆಚನ್ ಮುಖಂಡ ರಮ್ಝಾನ್ ಕದಿರೋವ್ ಪ್ರಕಟಿಸಿದ್ದಾರೆ.

ಆಪ್ಟಿ ಅಲಾವುದಿನೋವ್ ಅವರು ಚೆಚನ್ ಗಣರಾಜ್ಯದ ಒಂದು ಸಾವಿರ ಮಂದಿ ಸ್ವಯಂಸೇವಕ ಯೋಧರ ಪಡೆಯ ನೇತೃತ್ವ ವಹಿಸುವರು ಎಂದು ಟೆಲೆಗ್ರಾಂನಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್ ದೇಶವನ್ನು ನಾಝಿವಾದದಿಂದ ಮುಕ್ತಗೊಳಿಸುವ ಮತ್ತು ದೇಶವನ್ನು ಮಿಲಿಟರಿ ಮುಕ್ತಗೊಳಿಸುವ ಕಾರ್ಯಾಚರಣೆಯಲ್ಲಿ ಈ ಯೋಧರು ಹೋರಾಡಲಿದ್ದಾರೆ ಎಂದು ಕದಿರೋವ್ ಸ್ಪಷ್ಟಪಡಿಸಿದ್ದಾರೆ. ಕದಿರೋವ್ ಅವರ ಭದ್ರತಾ ಪಡೆಗಳ ವಿರುದ್ಧ ಅಸಂಖ್ಯಾತ ಕಿರುಕುಳ ಆರೋಪಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News