2021ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಯುವಜನತೆಯ ನಡುವೆ ಶೇ 25.5ರಷ್ಟು ಏರಿಕೆ ಕಂಡಿದ್ದ ನಿರುದ್ಯೋಗ ಪ್ರಮಾಣ

Update: 2022-03-18 14:55 GMT
Photo: PTI

ಹೊಸದಿಲ್ಲಿ: ದೇಶಾದ್ಯಂತ  ನಗರ ಪ್ರದೇಶಗಳಲ್ಲಿ ಯುವಜನರಲ್ಲಿ ನಿರುದ್ಯೋಗ ಪ್ರಮಾಣ 2021ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 25.5ರಷ್ಟು ಏರಿಕೆಯಾಗಿತ್ತು ಹಾಗೂ ಈ ಪ್ರಮಾಣ ದೇಶದಲ್ಲಿ ಕೋವಿಡ್ ಎರಡನೇ ಅಲೆ ವೇಳೆ ಎರಡಂಕಿಯಲ್ಲಿಯೇ ಉಳಿದಿತ್ತು ಎಂದು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ ತಿಳಿಸಿದೆ.

ಈ ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 15-29 ವಯೋವರ್ಗದವರಲ್ಲಿ ಗರಿಷ್ಠ- ಶೇ 47ರಷ್ಟು ನಿರುದ್ಯೋಗ ಪ್ರಮಾಣವಿತ್ತು. ಈ ವಯೋವರ್ಗದವರಲ್ಲಿ 22 ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಎರಡಂಕಿ ತಲುಪಿತ್ತು.

ಮಹಿಳೆಯರ ಪೈಕಿ 15-29 ವಯೋವರ್ಗದವರಲ್ಲಿ ನಿರುದ್ಯೋಗ ಪ್ರಮಾಣ ಕಳೆದ ವರ್ಷದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಗರಿಷ್ಠ- ಶೇ 31ರಷ್ಟಿದ್ದರೆ ಇದೇ ಅವಧಿಯಲ್ಲಿ ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ 24ರಷ್ಟಿತ್ತು.

ಜಮ್ಮು ಕಾಶ್ಮೀರದಲ್ಲಿ  ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ-ಶೇ 67.3 ಆಗಿದ್ದರೆ, ಕೇರಳದಲ್ಲಿ ಶೇ 59.2, ಅಸ್ಸಾಂನಲ್ಲಿ ಶೇ 53.6, ರಾಜಸ್ಥಾನದಲ್ಲಿ ಶೇ 50.8, ಬಿಹಾರದಲ್ಲಿ ಶೇ 45.2 ಮತ್ತು ಉತ್ತರಾಖಂಡದಲ್ಲಿ ಶೇ 45.2 ಆಗಿತ್ತು.

ಆರ್ಥಿಕ ವರ್ಷ 2021-2022ರ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ  ಎಲ್ಲಾ ವಯೋವರ್ಗದವರಲ್ಲಿ ನಿರುದ್ಯೋಗ ಪ್ರಮಾಣ  ಕಳೆದ ತ್ರೈಮಾಸಿಕದ ಶೇ 9.3ರಿಂದ ಶೇ 12.6ಗೆ ಏರಿಕೆಯಾಗಿದೆ.

ದೇಶದಲ್ಲಿ ಕೋವಿಡ್ ಮೊದಲನೇ ಅಲೆ ವೇಳೆ, 2020ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ 34.7ಗೆ ಏರಿಕೆಯಾಗಿದೆ. ಆದರೆ ದಿಲ್ಲಿ, ಕರ್ನಾಟಕ, ಅಸ್ಸಾಂ, ಪಂಜಾಬ್, ಒಡಿಶಾ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ  2021ರಲ್ಲಿ ಇಳಿಕೆಯಾಗಿದ್ದರೂ ಎರಡಂಕಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News