×
Ad

ಮಾ.20ರಂದು ಕರ್ನಾಟಕ ಮುಸ್ಲಿಂ ಜಮಾಅತ್ ನಿಂದ ಪ್ರತಿನಿಧಿ ಸಮಾವೇಶ ʼಎಕ್ಸ್ ಪ್ಯಾಂಡ್-22ʼ

Update: 2022-03-19 10:04 IST

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯು ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಲು ಮತ್ತು ಬಲಿಷ್ಠಗೊಳಿಸಲು 4 ವಿಭಾಗೀಯ ಪ್ರತಿನಿಧಿ ಸಮಾವೇಶ ಆಯೋಜಿಸಲು ತೀರ್ಮಾನಿಸಿದ್ದು, ಅದರ ಭಾಗವಾಗಿ ಕರಾವಳಿ, ಮಲೆನಾಡು ಜಿಲ್ಲೆಗಳ  ಕಾರ್ಯಕ್ರಮ ʼಎಕ್ಸ್ ಪ್ಯಾಂಡ್-22ʼ ಪ್ರಥಮವಾಗಿ ಮಾ.20ರಂದು ಬೆಳಗ್ಗೆ 10ರಿಂದ ಸಂಜೆ4ರವರೆಗೆ ಮಾಣಿ ಸಮೀಪದ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ತರಬೇತುದಾರರಾಗಿ ದೇಶೀಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿಗಳಾದ ಎನ್ ಅಲಿ ಅಬ್ದುಲ್ಲಾ ಸಾಹೇಬ್ ಹಾಗೂ ಕೇರಳ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ವಂಡೂರ್ ಅಬ್ದುಲ್ ರಹ್ಮಾನ್ ಫೈಝೀ ಭಾಗವಹಿಸಲಿದ್ದಾರೆ.

ಬೆಳಗ್ಗೆ 10ರಿಂದ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ವಿವಿಧ ನಾಯಕರು ವಿವಿಧ ವಿಷಯಗಳಲ್ಲಿ ತರಗತಿ ನಡೆಸಲಿದ್ದಾರೆ ಎಂದು ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News