×
Ad

ಅಧ್ಯಕ್ಷ ಪುಟಿನ್ ಭಾಷಣದ ಪ್ರಸಾರವನ್ನು ಮಧ್ಯದಲ್ಲಿ ನಿಲ್ಲಿಸಿದ ರಷ್ಯಾದ ಟಿವಿ!

Update: 2022-03-19 11:07 IST

ಮಾಸ್ಕೋ: ಮಾಸ್ಕೋದ ಮುಖ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಹತ್ತಾರು ಸಾವಿರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಪುಟಿನ್ ಅವರ ಭಾಷಣವನ್ನು ರಷ್ಯಾದ ರಾಜ್ಯ ಟೆಲಿವಿಷನ್ ಮಧ್ಯದಲ್ಲಿ ಕಡಿತಗೊಳಿಸಿರುವ ಅಪರೂಪದ ವಿದ್ಯಮಾನ ನಡೆದಿದೆ.

ರಷ್ಯಾದ ನಾಯಕ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಸರಕಾರಿ ದೂರದರ್ಶನದಲ್ಲಿ ದೇಶಭಕ್ತಿಯ ಸಂಗೀತದ ಕ್ಲಿಪ್ ಅನ್ನು ತೋರಿಸಲಾಯಿತು.

ರಷ್ಯಾದ ರಾಜ್ಯ ದೂರದರ್ಶನವನ್ನು ಬಿಗಿಯಾಗಿ ನಿಯಂತ್ರಿಸಲಾಗುತ್ತದೆ ಹಾಗೂ  ಅಂತಹ ಅಡಚಣೆಗಳು ಹೆಚ್ಚು ಅಸಾಮಾನ್ಯವಾಗಿವೆ.

"ಸರ್ವರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಸಾರದಲ್ಲಿ ಅಡಚಣೆಯಾಗಿದೆ" ಎಂದು ರಶ್ಯವು ಸ್ಪಷ್ಟಪಡಿಸಿದೆ.

ಸುಮಾರು 10 ನಿಮಿಷಗಳ ನಂತರ  ಸ್ಟೇಟ್ ಟೆಲಿವಿಷನ್ ಪುಟಿನ್ ಅವರ ಭಾಷಣವನ್ನು ಆರಂಭದಿಂದ ಕೊನೆಯವರೆಗೆ ಮರು ಪ್ರಸಾರ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News