×
Ad

ಹಿರಿಯಡ್ಕ: ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ

Update: 2022-03-19 20:45 IST

ಹಿರಿಯಡ್ಕ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವಿದಾನಸಭೆ ಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಇಂದು ಹಿರಿಯಡ್ಕದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಾಲಯಗಳಿಗೆ ಹೆಚ್ಚಾಗಿ ತೆರಳದ ಸಿದ್ದರಾಮಯ್ಯ, ಸಿರಿಜಾತ್ರೆಯಿಂದ ಪ್ರಸಿದ್ಧಿ ಪಡೆದಿರುವ ಈ ದೇವಾಲಯಕ್ಕೆ ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಐವನ್ ಡಿಸೋಜ ಹಾಗೂ ಮೊಯ್ದಿನ್ ಬಾವಾ ಜೊತೆ ತೆರಳಿದರು.

ತುಳುನಾಡಿನ ಪ್ರಸಿದ್ಧ ಅಲಡೆ ಕ್ಷೇತ್ರಗಳಲ್ಲಿ ಒಂದಾಗಿರುವ ಹಿರಿಯಡ್ಕದ ಮಹತೋಭಾರ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಿರಿಜಾತ್ರೆ ಪ್ರಸಿದ್ಧವಾಗಿದೆ. ೨೦೧೮ರಲ್ಲಿ ಈ ದೇವಸ್ಥಾನದ  ಜೀರ್ಣೋದ್ಧಾರ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News