ಆರ್ ಜೆಡಿಯೊಂದಿಗೆ ಶರದ್ ಯಾದವ್ ಅವರ ಎಲ್ ಜೆಡಿ ವಿಲೀನ

Update: 2022-03-20 07:57 GMT

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರು ತಮ್ಮ ಲೋಕತಾಂತ್ರಿಕ ಜನತಾ ದಳವನ್ನು (ಎಲ್‌ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ (ಆರ್‌ಜೆಡಿ) ಹೊಸದಿಲ್ಲಿಯಲ್ಲಿ ವಿಲೀನಗೊಳಿಸಿದರು ಎಂದು ಸುದ್ದಿಸಂಸ್ಥೆ ANI ಟ್ವೀಟಿಸಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರವ್ಯಾಪಿ ಸವಾಲುಗಳನ್ನು ಎದುರಿಸಲು ಹಿಂದಿನ ಜನತಾ ದಳದ ವಿವಿಧ ಶಾಖೆಗಳನ್ನು ಒಗ್ಗೂಡಿಸುವ ಶರದ್ ಯಾದವ್ ಅವರ ಪ್ರಯತ್ನಗಳ ಭಾಗವಾಗಿ ವಿಲೀನವನ್ನು ಕೈಗೊಳ್ಳಲಾಗುವುದು ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.

ಮಧೇಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಶರದ್ ಯಾದವ್, ನಿತೀಶ್ ಕುಮಾರ್ ಜತೆಗಿನ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಜೆಡಿಯು ಸಂಬಂಧ ಮುರಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News