ಮೋದಿ ನೇತೃತ್ವದ ಬಿಜೆಪಿ ನಾಯಕರ ಸಭೆ: ಉ.ಪ್ರ, ಉತ್ತರಾಖಂಡ, ಗೋವಾದಲ್ಲಿ ಸರಕಾರ ರಚನೆ ಕುರಿತು ಸಮಾಲೋಚನೆ

Update: 2022-03-20 18:33 GMT

ಹೊಸದಿಲ್ಲಿ, ಮಾ.20: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿರುವ ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ , ಮಣಿಪುರ ಹಾಗೂ ಗೋವಾಗಳಲ್ಲಿ  ಸರಕಾರ ರಚನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಹೊಸದಿಲ್ಲಿಯ ತನ್ನ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆಯಲ್ಲಿ ಭಾಗವಹಿಸಿದ್ದರು.


 ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಎರಡನೆ ಅವಧಿಗೆ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದಾಗ್ಯೂ ಅವರ ಸಂಪುಟದಲ್ಲಿ ಯಾರ್ಯಾರಿಗೆ ಪ್ರಾತಿನಿಧ್ಯ ದೊರೆಯಲಿದೆ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹೊರಬೀಳದೆ ಇರುವುದು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ. ಉ.ಪ್ರ. ಸಂಪುಟ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯು ಕೊನೆ ಹಂತದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಪ್ರಕ್ರಿಯಲ್ಲಿ ತೊಡಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.


 ಬಿಜೆಪಿಯು ಸ್ಪಷ್ಟ ಬಹುಮತವನ್ನು ಪಡೆದಿರುವ ಉತ್ತರಾಖಂಡದಲ್ಲಿಯೂ ಮುಖ್ಯಮಂತ್ರಿ ಯಾರಾಗಲಿದ್ದಾರೆಂುದು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ಸೋಮವಾರ ಸಂಜೆ ಡೆಹ್ರಾಡೂನ್ನಲ್ಲಿ ಉತ್ತರಾಖಂಡ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು , ಅಲ್ಲಿ ಮುಖ್ಯಮಂತ್ರಿಯವರ ಹೆಸರನ್ನು ಪ್ರಕಟಿಸಲಾಗುವುದೆಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಪಕ್ಷ ಕೇಂದ್ರೀಯ ವೀಕ್ಷಕರಾಗಿ ರಾಜ್ನಾಥ್ ಸಿಂಗ್ ಹಾಗೂ ಮೀನಾಕ್ಷಿ ಲೇಖಿ ಸಭೆಗೆ ಆಗಮಿಸಲಿದ್ದಾರೆ.ನೂತನ ಮುಖ್ಯಮಂತ್ರಿ ಆಯ್ಕೆ ಕುರಿತ ನಿಗೂಢತೆ ಮುಂದುವರಿದಿರುವಂತೆಯೇ ಬಿಜೆಪಿಯ ಉತ್ತರಾಖಂಡ ನಾಯಕರು ನೂತನವಾಗಿ ಆಯ್ಕೆಯಾದ ಮುಖ.್ಯಮಂತ್ರಿಯವರು ಸಂಪುಟದ ಇತರ 11 ಮಂಜಿ ಸಚಿವರೊಂದಿಗೆ ಮಾರ್ಚ್ 23ರಂದು ಪರೇಡ್ ಮೈದಾನದಲ್ಲಿ ಬಹಿರಂಗಾಗಿ ಪ್ರಮಾ ವಚನ ಸ್ವೀಕರಿಸಲಿದ್ದಾರೆಂದು ದೃಢಪಡಿಸಿದ್ದಾರೆ.


 ಗೋವಾದಲ್ಲಿ ಹಂಗಾಮಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮತ್ತೊಮ್ಮೆ ನೂತನ ಸರಕಾರದ ನೇತೃತ್ವ ವಹಿಸುವ ಸಾಧ್ಯತೆಗಳು ದಟ್ಟವಾಗಿವೆ. ಆದಾಗ್ಯೂ ಬಿಜೆಪಿಯು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ. ಈ ಮಧ್ಯೆ ಗೋವಾದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಮೋದ್ ಸಾವಂತ್ ಹಾಗೂ ಮಾಜಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ನೇತೃತ್ವದ ಬಣಗಳ ನಡುವೆ ಪೈಪೋಟಿ ನಡೆದಿದೆಯೆನ್ನಲಾಗಿದೆ. ಆದರೆ ಸಾವಂತ್ ಹಾಗೂ ರಾಣೆ ಅದನ್ನು ನಿರಾರಿಸಿದ್ದಾರೆ.

ಮಣಿಪುರದಲ್ಲಿ ಬಿಜೆಪಿಯ ಮುಖ್ಯಮಂತ್ರಿಯಾಗಿ ಎನ್.ಬಿರೇನ್ಸಿಂಗ್ ಅವರನ್ನು ರವಿವಾರ ಎರಡನೆ ಅವಧಿಗೆ ಆಯ್ಕೆ ಮಾಡಲಾಗಿದೆ. ಮಣಿಪುರ ಬಿಜೆಪಿಯ ಶಾಸಕಾಂಗ ಪಕ್ಷ ಸಭೆಯಲ್ಲಿ ಬಿರೇನ್ಸಿಂಗ್ ಅವರನ್ನು ರವಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು ಕೇಂದ್ರದ ವೀಕ್ಷಕರಾಗಿ ಬಿಜೆಪಿ ಶಾಸಕಾಂಗ ಸಭೆಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News