×
Ad

ಅಫ್ಘಾನಿಸ್ತಾನದ ಮಾಜಿ ಹಣಕಾಸು ಸಚಿವ ಈಗ ಅಮೆರಿಕದಲ್ಲಿ ಉಬರ್ ಕ್ಯಾಬ್ ಚಾಲಕ!

Update: 2022-03-21 13:45 IST
Photo:twitter

ಕಾಬೂಲ್: ಈ ಹಿಂದೆ  ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿ 6 ​​ಶತಕೋಟಿ ಡಾಲರ್ ಬಜೆಟ್ ಅನ್ನು ಮೇಲ್ವಿಚಾರಣೆ ಮಾಡಿದ ಹಾಗೂ  ಪ್ರಸ್ತುತಪಡಿಸಿದ ಖಾಲಿದ್ ಪಯೆಂಡಾ ಈಗ ತಮ್ಮ ಕುಟುಂಬವನ್ನು ಸಲಹಲು ವಾಷಿಂಗ್ಟನ್ ಡಿಸಿ ಯಲ್ಲಿ ಉಬರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. 'ವಾಷಿಂಗ್ಟನ್ ಪೋಸ್ಟ್‌'ನೊಂದಿಗೆ ಮಾತನಾಡಿದ ಅವರು "ತನ್ನ ಪ್ರಯಾಣವನ್ನು ಲೆಕ್ಕಿಸದೆ ಆರು ಗಂಟೆಗಳ ಕೆಲಸಕ್ಕೆ 150 ಡಾಲರ್‌ಗಳಿಗಿಂತ ಸ್ವಲ್ಪ ಹೆಚ್ಚು ಗಳಿಸುತ್ತೇನೆ" ಎಂದು ಹೇಳಿದರು.

ಅಫ್ಘಾನಿಸ್ತಾನವು ಪ್ರಸ್ತುತ ಆರ್ಥಿಕ ಹಾಗೂ  ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನಿ ಅಶ್ರಫ್ ಘನಿ ಅವರೊಂದಿಗಿನ ಸಂಬಂಧ ಹಳಸಿದ ಕಾರಣ ತಾಲಿಬಾನ್ ರಾಜಧಾನಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಒಂದು ವಾರದ ಮೊದಲು ಪಯೆಂಡಾ ದೇಶದ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಗಸ್ಟ್ 10 ರಂದು ಟ್ವೀಟ್ ಮಾಡಿದ್ದ ಅವರು  “ಇಂದು ನಾನು ಹಂಗಾಮಿ ಹಣಕಾಸು ಸಚಿವ ಸ್ಥಾನದಿಂದ ಕೆಳಗಿಳಿದಿದ್ದೇನೆ. ಹಣಕಾಸು ಸಚಿವಾಲಯವನ್ನು ಮುನ್ನಡೆಸುವುದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ.  ಆದರೆ  ವೈಯಕ್ತಿಕ ಆದ್ಯತೆಗಳಿಗೆ ಮಹತ್ವ ನೀಡಲು  ಕೆಳಗಿಳಿಯುವ ಸಮಯವಾಗಿತ್ತು'' ಎಂದು ಬರೆದಿದ್ದಾರೆ.

ಸರಕಾರದಿಂದ ಬಂಧನಕ್ಕೊಳಗಾಗುವ ಭಯದಿಂದ ಖಾಲಿದ್ ಪಯೆಂಡಾ ಅವರು ಅಫ್ಘಾನಿಸ್ತಾನವನ್ನು ತೊರೆದರು ಹಾಗೂ  ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ತಮ್ಮ ಕುಟುಂಬವನ್ನು ಸೇರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News