×
Ad

ಚೀನಾ: 133 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ

Update: 2022-03-21 13:51 IST

ಬೀಜಿಂಗ್ : ನೈಋತ್ಯ ಚೀನಾದಲ್ಲಿ 133 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ ಈಸ್ಟರ್ನ್ ಪ್ಯಾಸೆಂಜರ್ ಜೆಟ್ ಪತನಗೊಂಡಿದೆ ಎಂದು  ಸರಕಾರಿ ಮಾಧ್ಯಮ ವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ಸೋಮವಾರ ವರದಿ ಮಾಡಿದೆ.

ಬೋಯಿಂಗ್ 737 ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ ಹಾಗೂ  "ಪರ್ವತದಲ್ಲಿ  ಬೆಂಕಿ ಕಾಣಿಸಿಕೊಂಡಿದೆ". ರಕ್ಷಣಾ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು  ಸರಕಾರಿ ಪ್ರಸಾರಕ ಸಿಸಿಟಿವಿ ತಿಳಿಸಿದೆ.

ವಿಮಾನ ಪತನದ ಬಳಿಕ ಸಾವು-ನೋವಿನ ಕುರಿತು ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News