ಸ್ವಕ್ಷೇತ್ರದಲ್ಲಿ ಸೋತರೂ ಎರಡನೇ ಬಾರಿ ಸಿಎಂ ಆಗಿ ಅಧಿಕಾರ ವಹಿಸಲಿರುವ ಪುಷ್ಕರ್‌ ಧಾಮಿ

Update: 2022-03-21 13:16 GMT
ಪುಷ್ಕರ್ ಸಿಂಗ್ ಧಾಮಿ (PTI)

ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಎರಡನೇ ಬಾರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಧಾಮಿ ಅವರು ತಮ್ಮ ಸ್ವಂತ ಕ್ಷೇತ್ರ ಖತಿಮಾದಲ್ಲಿ ಸೋತಿದ್ದರೂ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಗೆಲ್ಲಿಸಲು ಅವರು ಮಾಡಿರುವ ಶ್ರಮವನ್ನು ಗುರುತಿಸಿ ಅವರಿಗೆ ಮುಖ್ಯಮಂತ್ರಿ ಪದವಿ ಕೊಡಲಾಗಿದೆ ಎಂದು ಹೇಳಲಾಗಿದೆ. 

ಉತ್ತಖಾಂಡ್‌ ಮುಖ್ಯಮಂತ್ರಿ ರೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಹಿರಿಯ ನಾಯಕ ಸತ್ಪಾಲ್ ಮಹಾರಾಜ್ ಕೂಡಾ ಮುಂಚೂಣಿಯಲ್ಲಿದ್ದರು ಎಂದು ndtv.com ವರದಿ ಮಾಡಿದೆ. 

ಆದಾಗ್ಯೂ, ಧಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ನ ಬಲವಾದ ಬೆಂಬಲವನ್ನು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಪ್ರಧಾನಿ ಮೋದಿಯವರಿಂದ ಅನುಮೋದನೆಯ ಮುದ್ರೆ ಬಿದ್ದಿತ್ತು ಎಂದು ಎನ್‌ಡಿಟಿವಿ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News